ಚಾಮರಾಜನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಕೇಂದ್ರದಲ್ಲಿ ಬುಧವಾರ ಮೈಸೂರಿನ ಓಡಿಪಿ ಸಂಸ್ಥೆಯಿಂದ ಮಹಿಳಾ ಹಾಗೂ ಪುರುಷರ ಸ್ವಸಹಾಯ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.

ನಗರದ ನಾಲ್ಕು ಭಾಗದಲ್ಲಿ ಪ್ರತ್ಯೇಕವಾಗಿ ಗುಂಪುಗಳ ಮೂಲಕ ರಸ್ತೆಬದಿ ಹಾಗೂ ಜನನಿಬಿಡ ಪ್ರದೇಶದಲ್ಲಿ ಬಿದ್ದಿದ್ದ ಕಸ ಸಂಗ್ರಹಿಸಿ ನಗರಸಭೆಯ ತ್ಯಾಜ್ಯ ವಿಲೇವಾರಿ ಟ್ರ್ಯಾಕ್ಟರ್ಗಳಿಗೆ ಹಾಕಿದರು. ಪ್ರವಾಸಿ ಮಂದಿರದ ಮುಂಭಾಗ ಪರಿಸರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಮಾತನಾಡಿ, ಓಡಿಪಿ ಸಂಸ್ಥೆ ಪರಿಸರ ದಿನಾಚರಣೆ ಅಂಗವಾಗಿ ನಗರವನ್ನು ಸ್ವಚ್ಛಗೊಳಿಸಲು ಮುಂದಾಗಿರುವುದು ಶ್ಲಾಘನೀಯ.

ಆ ಮೂಲಕ ಗ್ರಾಮೀಣ ಮಹಿಳೆಯಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಂತಪೌಲರ ಮಂದಿರ, ಖಾಸಗಿ ಬಸ್ನಿಲ್ದಾಣ ಹಾಗೂ ರಾಮ ಸಮುದ್ರದ ಪೂರ್ವ ಠಾಣೆ ಮುಂಭಾಗ ದಿಂದ ಸ್ವಸಹಾಯ ಸಂಘದ ಸದಸ್ಯರು ಕಸಪೊರಕೆ, ಕೈಚೀಲ ಹಿಡಿದು ಒಣಕಸ ಹಾಗೂ ಪ್ಲಾಸ್ಟಿಕ್ ಸಂಗ್ರಹಿಸಿದರು. ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಸಂಸ್ಥೆಯ ವಲಯಾಧಿ ಕಾರಿ ಗಂಗಾಧರಸ್ವಾಮಿ, ಹರಳಪ್ಪ, ಕ್ಷೇತ್ರಾಧಿ ಕಾರಿ ಶಾಂತರಾಜು, ಮೇರಿ ಜೋಸೆಫ್, ರಾಮಕೃಷ್ಣ,ರವಿಕುಮಾರ್, ರಂಗಸ್ವಾಮಿ, ಪುಷ್ಪಲತಾ, ಚಿನ್ನಮ್ಮ, ರೇಖಾ, ಮೇರಿಗ್ರೇಸಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.