ವಾಷಿಂಗ್ಟನ್ (ಪಿಟಿಐ): ಬಾಹ್ಯಾಕಾಶ ಚಟುವಟಿಕೆಯ ಮೇಲೆ ನಿಗಾ ಇಡುವ ಉದ್ದೇಶದಿಂದ ಅಮೆರಿಕವು, ಅಂತರ ರಾಷ್ಟ್ರೀಯ ನೀತಿ ಸಂಹಿತೆಯನ್ನು ರೂಪಿಸಲು ಐರೋಪ್ಯ ಒಕ್ಕೂಟ, ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಮಾತುಕತೆಗೆ ಸಜ್ಜಾಗಿದೆ.

ಈ ನೀತಿ ಸಂಹಿತೆಯು ಬಾಹ್ಯಾಕಾಶದ ದೀರ್ಘಕಾಲೀನ ಸುಸ್ಥಿರತೆ, ಸುರಕ್ಷೆ, ಸ್ಥಿರತೆ, ಭದ್ರತೆ ಹಾಗೂ ಈ ದಿಸೆಯಲ್ಲಿ ಅಂತರ ರಾಷ್ಟ್ರೀಯ ಸಮುದಾಯ ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮಂಗಳವಾರ ಹೇಳಿದ್ದಾರೆ.

`ಅವಶೇಷಗಳು ಹಾಗೂ ಹೊಣೆಗೇಡಿ ಕೃತ್ಯಗಳಿಂದಾಗಿ ಬಾಹ್ಯಾಕಾಶದ ದೀರ್ಘಕಾಲೀನ ಸುಸ್ಥಿರತೆ ಅಪಾಯದಲ್ಲಿದೆ. ಇವೆಲ್ಲವುಗಳಿಂದ ನಮ್ಮ ಅಂತರಿಕ್ಷ ವ್ಯವಸ್ಥೆಗಳನ್ನು ರಕ್ಷಿಸುವುದು ಅಮೆರಿಕ ಹಾಗೂ ವಿಶ್ವ ಸಮುದಾಯದ ಮುಖ್ಯ ಕಾಳಜಿ~ ಎಂದೂ ಅವರು ತಿಳಿಸಿದ್ದಾರೆ.

ಬಾಹ್ಯಾಕಾಶ ವ್ಯವಸ್ಥೆಗಳಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಅಡೆತಡೆ ಇಲ್ಲದೆ ಮುಕ್ತವಾಗಿ ಮಾಹಿತಿ ವಿನಿಮಯ, ಹವಾಮಾನ ಮುನ್ಸೂಚನೆ, ಜಾಗತಿಕ ಸಮುದ್ರಯಾನಕ್ಕೆ ಅನುಕೂಲವಾಗಿದೆ.

`ಅಂತರ ರಾಷ್ಟ್ರೀಯ ಸಮುದಾಯವು ಈ ವ್ಯವಸ್ಥೆಗಳಿಗೆ ಎದುರಾಗಿರುವ ಎಲ್ಲ ಸವಾಲುಗಳನ್ನೂ ಎದುರಿಸದಿದ್ದರೆ, ನಮ್ಮ ಸುತ್ತಲಿನ ವಾತಾವರಣ ಬಾಹ್ಯಾಕಾಶ ಯಾನ, ಉಪಗ್ರಹ ವ್ಯವಸ್ಥೆಗಳಿಗೆ ಮಾರಕವಾಗಿ ಪರಿಣಮಿಸಲಿದೆ. ಅಂತಿಮವಾಗಿ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ~ ಎಂದು ಕ್ಲಿಂಟನ್ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.