ಬೆಂಗಳೂರು: ನಗರದ ಬನಶಂಕರಿಯಲ್ಲಿ ಸಂತ ಆಸಾರಾಮಜಿ ಆಶ್ರಮದಲ್ಲಿ ಸಂತ ಆಸಾರಾಮಜಿ ಬಾಪೂ ಅವರ 72 ನೇ ಅವತರಣ ದಿವಸವನ್ನು ವಿಶ್ವ ಸೇವಾ ದಿನವನ್ನಾಗಿ ಭಾನುವಾರ ಆಚರಿಸಲಾಯಿತು.

ಇದರ ಅಂಗವಾಗಿ ನಗರದ ಪುರಭವನದಿಂದ ಮೈಸೂರ್ ಬ್ಯಾಂಕ್ ವೃತ್ತದ ವರೆಗೆ ಹರಿನಾಮ ಸಂಕೀರ್ತನೆ ಯಾತ್ರೆ ಹಮ್ಮಿಕೊಳ್ಳಲಾಯಿತು. ಕೀರ್ತನ ಯಾತ್ರೆಯಲ್ಲಿ 108 ಕಲಶ ಮತ್ತು ಆಸಾರಾಮಜಿ ಬಾಪೂ ಅವರ ಜೀವನ ಸಂಬಂಧಿ ಪುಸ್ತಕಗಳ ಮೆರವಣಿಗೆ ನಡೆಯಿತು. ಯಾತ್ರೆಯಲ್ಲಿ ಭಕ್ತರು ಹಾಗೂ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಭಾಗವಹಿಸಿದ್ದರು. ಆಶ್ರಮದಲ್ಲಿ 72 ತುಪ್ಪದ ದೀಪ ಬೆಳಗಿಸಿ ಆಸಾರಾಮಾಯಣ ಪಾಠ ಮತ್ತು ಕೀರ್ತನೆ ಯಾತ್ರೆ ಮಾಡಿದರು.

ಸಂತ ಆಸಾರಾಮಜಿ ಬಾಪೂ ಆಶೀರ್ವಚನ ನೀಡಿ, `ಸಂಸ್ಕಾರವಂತ ಮನುಷ್ಯನಲ್ಲಿ ಪ್ರಭುವಿನ ನಿವಾಸ ಇರುತ್ತದೆ~ ಎಂದರು. ಅವತರಣ ದಿವಸದ ಅಂಗವಾಗಿ ಬುಧವಾರ ನಗರದ ಬನಶಂಕರಿ, ಮೈಸೂರು ರಸ್ತೆ, ಬಿಟಿಎಂ, ಚಿಕ್ಕಪೇಟೆ, ಪೀಣ್ಯಾ, ಅಲಸೂರು, ವಿದ್ಯಾರಣ್ಯಪುರ, ಯಶವಂತಪುರ, ಮಾರತಹಳ್ಳಿಯಲ್ಲಿ ಉಚಿತ ಪಾನಕ ಮತ್ತು ಸಾಹಿತ್ಯಗಳ ವಿತರಣೆ ಮಾಡಲಾಗುವುದು.

ಇದೇ 21 ಮತ್ತು 22ರಂದು ಗ್ರೀಷ್ಮಕಾಲೀನ ಶಿಬಿರ ಆಯೋಜಿಸಲಾಗಿದೆ. ಶಿಬಿರದ ಮಾಹಿತಿಗಾಗಿ 080-32533833 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.