ಗುರುವಾರ , ಏಪ್ರಿಲ್ 15, 2021
26 °C

ವೀರಭದ್ರೇಶ್ವರ ರಥ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ವೀರಭದ್ರೇಶ್ವರರ ರಥ ನಿರ್ಮಾಣಕ್ಕೆ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಈಚೆಗೆ ಚಾಲನೆ ನೀಡಲಾಯಿತು.ಶರಭಾವತಾರ ವೀರಭದ್ರೇಶ್ವರರ 3ನೇ ಜಾತ್ರಾ ಮಹೋತ್ಸವ ಸಂದಂರ್ಭದಲ್ಲಿ ಅರ್ಪಿಸುವುದಕ್ಕಾಗಿ ರಥ ನಿರ್ಮಾಣ ಮಾಡುತ್ತಿರುವುದು ಸಂತಸ ಸಂಗತಿ ಆಗಿದೆ ಎಂದು ನೌಬಾದ್‌ನ ಶಿವಯೋಗಾಶ್ರಮದ ಡಾ. ರಾಜಶೇಖರ ಸ್ವಾಮೀಜಿ ಗೋರ್ಟಾ ತಿಳಿಸಿದರು.ರಥ ನಿರ್ಮಾಣಕ್ಕೆ ಎಲ್ಲರು ಸಹಾಯ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಶಾಲರಾವ ಯಾಬಾ ಮನವಿ ಮಾಡಿದರು. ಭಾರತೀಯ ಆಹಾರ ನಿಗಮದ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿದರು.  ಶಿವಶಂಕರ ಗಚ್ಚಿನಮಠ, ಮಲ್ಲಿಕಾರ್ಜುನ ಔರಾದಿ, ಬಾಬುರಾವ ಕ್ಯಾಸಾ, ಕಲ್ಯಾಣರಾವ ಯಾಬಾ, ದಯಾನಂದ ಕಂಬಾರ, ಸೋಮನಾಥ ಸ್ವಾಮಿ, ರಾಜು ಯಾಬಾ, ಪ್ರಭುಶೆಟ್ಟಿ, ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು. ರಥಕ್ಕಾಗಿ ದೇಣಿಗೆ ಸಂಗ್ರಹ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.