ಗುರುವಾರ , ಮೇ 19, 2022
20 °C

`ವೀರ ಬಸವಣ್ಣ' ಚಿತ್ರ ನಿಷೇಧಕ್ಕೆ ಆಗ್ರಹಿಸಿ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: `ವೀರ ಬಸವಣ್ಣ' ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಬಸವ ಸೈನ್ಯ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಭಾರತ ವೀರಶೈವ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ರೈತ ಸಂಘ, ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಬಸವನ ಬಾಗೇವಾಡಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ ಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಶಾಲಾ- ಕಾಲೇಜು ಬಂದ್ ಮಾಡುವಂತೆ ಮನವಿ ಮಾಡಿ ಕೊಂಡಿದ್ದರಿಂದ ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ಮನೆಯ ಕಡೆ ಹೆಜ್ಜೆ ಹಾಕಿದರು. ಬಸ್ ಸಂಚಾರ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಸ್ಥಗಿತ ಗೊಂಡಿತ್ತು. ಮುಖ್ಯ ರಸ್ತೆಗಳಿಗೆ ಬ್ಯಾರಲ್‌ಗಳನ್ನು ಇಟ್ಟು, ಟೈರ್‌ಗೆ ಬೆಂಕಿ ಹಚ್ಚಿ ವಾಹನಗಳ ಸಂಚಾರಕ್ಕೆ ತಡೆ ಒಡ್ಡ ಲಾಗಿತ್ತು.ಬಸವೇಶ್ವರ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡರು.ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಬಾಳನ ಗೌಡ ಪಾಟೀಲ, ಮಲ್ಲಿಕಾರ್ಜುನ ನಾಯಕ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಸಂದೇಶವನ್ನು ಸಾರಿ ಕಾಯಕ ತತ್ವಕ್ಕೆ ಮಹತ್ವ ಕೊಟ್ಟ ಮಹಾಪುರುಷರು. ಅಂತಹ ಮಹಾಪುರಷರಿಗೆ ಅಪಮಾನ ವಾಗುವ ರೀತಿಯಲ್ಲಿ ವೀರ ಬಸವಣ್ಣ ಚಲನಚಿತ್ರದ ಪೋಸ್ಟರ್‌ಗಳಲ್ಲಿ ನಟ ಉಪೇಂದ್ರ ಅವರಿಗೆ ವೇಷ ಭೂಷಣ ಹಾಕಿರುವುದು ಬಸವಭಕ್ತರಗಿ ನೋವನ್ನುಂಟುಮಾಡಿದೆ ಎಂದರು.ನಿರ್ಮಾಪಕ ಶ್ರೀನಿವಾಸರಾಜು ಅವರು ಬಸವಣ್ಣನವರಿಗೆ ಕಳಂಕ ತರುವ ರೀತಿಯಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿರುವುದನ್ನು ಖಂಡಿಸುತ್ತೇವೆ. ಇಂತಹ ಚಿತ್ರಗಳನ್ನು ತೆಗೆಯದಂತೆ ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು.ಮನಗೂಳಿಯ ಸಂಗನಬಸವ ದೇವರು, ಸ್ಥಳೀಯ ವಿರಕ್ತಮಠದ ಸಿದ್ದಲಿಂಗದೇವರು, ವಿವಿಧ ಸಂಘಟನೆ ಗಳ ಮುಖಂಡರಾದ ಲ.ರು. ಗೊಳ ಸಂಗಿ, ಸುರೇಶ ಮಣ್ಣೂರ, ಅರವಿಂದ ಸಾಲವಾಡಗಿ, ಎಚ್.ಎಸ್.ಗುರಡ್ಡಿ, ಸಂಗನಗೌಡ ಚಿಕ್ಕೊಂಡ,  ಎಸ್,ಎ, ಯರನಾಳ ಮಾತನಾಡಿದರು.ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅಪರ್ಣಾ ಪಾವಟೆ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನೀಲಪ್ಪ ನಾಯಕ, ಎಸ್.ಎಸ್.ಝಳಕಿ, ಬಸವರಾಜ ಗೊಳಸಂಗಿ, ಅಶೋಕ ಹಾರಿವಾಳ, ಮಹಾಂತೇಶ ಸಾಸಬಾಳ, ಸಿದ್ದಣ್ಣ ಕೊಟ್ರಶೆಟ್ಟಿ, ರವಿ ರಾಠೋಡ, ಬಾಬು ಪತ್ತಾರ, ಸಿದ್ರಾಮಪ್ಪ ರಂಜಣಗಿ, ಶಿವಲಿಂಗಯ್ಯ ತೆಗ್ಗಿನಮಠ, ಬಸವರಾಜ ಬಿಜಾಪುರ, ಮುತ್ತು ಉಕ್ಕಲಿ, ಸಂಗಮೇಶ ವಾಡೇದ, ಬಸವರಾಜ ಹಾರಿವಾಳ, ಚನ್ನಗೌಡ ಪಾಟೀಲ, ಬಾಬು ನಿಡಗುಂದಿ, ಈರಣ್ಣ ಬಿರಾದಾರ, ಸಂಗಮೇಶ ಜಾಲಗೇರಿ, ಶಿವಪ್ರಸಾದ ಅಕ್ಕಿ  ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.