ಶುಕ್ರವಾರ, ಜೂನ್ 25, 2021
29 °C

ವೃತ್ತಿ ಮೇಲೆ ಗೌರವವಿರಲಿ: ಮಹದೇವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ತಾನು ಮಾಡುವ ಕೆಲಸವನ್ನು ಗೌರವ ಭಾವನೆಯಿಂದ ನೋಡಿದಾಗ ಮಾತ್ರ ಆ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಬಿ. ಮಹದೇವಪ್ಪ ತಿಳಿಸಿದ್ದಾರೆ.ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ನೈಪುಣ್ಯ ನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.‘ಯುವಕರು ಯಾವುದೇ ಕೆಲಸ ಮಾಡಬೇಕಾದರೂ ಅದರ ಬಗ್ಗೆ ನೈಪುಣ್ಯತೆ ಹಾಗೂ ಕೆಲಸದ ಬಗ್ಗೆ ಗೌರವ ಭಾವನೆ ಹೊಂದಿರಬೇಕು. ಕೇವಲ ಹಣಗಳಿಕೆ ಉದ್ದೇಶದಿಂದ ಕೆಲಸ ಮಾಡಿದರೆ ವೃತ್ಇಯಲ್ಲಿ ಪ್ರಾವಿಣ್ಯ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದರು.ತರಬೇತುದಾರ ಬಿ.ಆರ್. ರಾಜ್ ಕುಮಾರ್ ‘ವೃತ್ತಿ ಕೌಶಲ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಸರ್ಕಾರ ನೈಪುಣ್ಯ ನಿಧಿ ಕಾರ್ಯಕ್ರಮ ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಎಚ್.ಎನ್. ರೂಪ್ ರಾಜ್ ಚಂದನ್ ‘ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.ನೈಪುಣ್ಯ ನಿಧಿ ಯೋಜನೆಯ ಸಂಚಾಲಕ ಎಸ್.ಆರ್. ಮೂರ್ತಿ, ಕಾಲೇಜಿನ ಅಧ್ಯಾಪಕರು ಹಾಜರಿದ್ದರು.

ಉಪನ್ಯಾಸ ಕಾರ್ಯಕ್ರಮ

ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಈಚೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿದ್ದ        ಪ್ರೊ.ಗೋಪಾಲ್‌ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಸಕಾರಾತ್ಮಕ ಗುಣಗಳಾದ ತಾಳ್ಮೆ, ನಂಬಿಕೆ, ಆತ್ಮವಿಶ್ವಾಸ ಮೈಗೂಡಿಸಿ­ಕೊಳ್ಳಬೇಕು.  ನಂಬಿಕೆ ಮತ್ತು ವಿಶ್ವಾಸ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳನ್ನು ಬೆಳೆಸಿ ನಕಾರಾತ್ಮಕ ಗುಣಗಳನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದರು.ಅಧ್ಯಾಪಕ ಸುಂದ್ರೇಶ್ ‘ಸಕಾರಾತ್ಮಕ ಗುಣಗಳು  ಜೀವನದಲ್ಲಿ ಒತ್ತಡಗಳನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗುತ್ತವೆ’ ಎಂದರು.ಅಧ್ಯಾಪಕರಾದ ಗುರುರಾಜ್, ರಾಧಕೃಷ್ಣ ರಮೇಶ ನಾಯ್ಕ, ಮರಿಗೌಡ, ನಾಗೇಂದ್ರನಾಥ ಗಿರಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ರಮೇಶ ಹಾಗೂ ಇತರರು ಹಾಜರಿದ್ದರು.ಮಹಾಮಂಡಲ ಪೂಜೆ

ಜಾವಗಲ್‌: ಇಲ್ಲಿಯ ಇತಿಹಾಸ ಪ್ರಸಿದ್ಧ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ 48ನೇ ದಿನದ ಮಹಾಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ಮಾ. 23ರ ಭಾನುವಾರ ನರಸಿಂಹ ಹೋಮ, ಗಣಪತಿ ಹೋಮ, ರುದ್ರಾಭಿಷೇಕ ಕಾರ್ಯಕ್ರಮಗಳು ನಡೆಯುತ್ತವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಭಕ್ತ ಮಂಡಳಿ ಕೋರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.