ರಾಮನಗರ: ವಾರಾಂತ್ಯ ಬಂದರೆ ಸಾಕು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿಪರೀತ ಸಂಚಾರ ದಟ್ಟಣೆ. ಇದರ ನಡುವೆ ಈ ರಸ್ತೆಯಲ್ಲಿ ದ್ವಿ ಚಕ್ರ ವಾಹನದಲ್ಲಿ ಅತಿ ವೇಗವಾಗಿ ಸಂಚರಿಸಿ `ಥ್ರಿಲ್~ ತೆಗೆದುಕೊಳ್ಳುವ ಯುವಕರು. ಇವರ `ಥ್ರಿಲ್~ಗೆ ಬೆಚ್ಚಿ ಬೀಳುವ ಇತರ ವಾಹನಗಳ ಸವಾರರು ಮತ್ತು ಸಾರ್ವಜನಿಕರು !

ಪ್ರತಿ ಶನಿವಾರ ಮತ್ತು ಭಾನುವಾರ ಹೈಟೆಕ್ ಬೈಕ್ಗಳು ಬೆಂಗಳೂರು- ಮೈಸೂರು ರಸ್ತೆಯಲ್ಲಿ ರೇಸ್ನಂತೆ ಓಡಾಡುತ್ತವೆ. ಈ ಬೈಕ್ಗಳನ್ನು ಶೋಕಿಗೆಂದು ಓಡಿಸುವ ಕೆಲ ಯುವ ಜನತೆ ಬೈಕಿನ ವೇಗಕ್ಕೆ ಕಡಿವಾಣ ಹಾಕುತ್ತಿಲ್ಲ ಎಂಬ ದೂರು ಇದೆ.

ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ ವೇಗದವರೆಗೆ ಸಂಚರಿಸಲು ಮಾತ್ರ ಅವಕಾಶ ಇದೆ. ಆದರೆ ಈ ಐಶಾರಾಮಿ ಬೈಕ್ಗಳನ್ನು `ರೈಡ್~ ಮಾಡುವ ಯುವ ಪಡೆ ಗಂಟೆಗೆ 150ರಿಂದ 160 ಕಿ.ಮೀ ವೇಗದಲ್ಲಿ ಬೈಕ್ ಓಡಿಸಿ `ಥ್ರಿಲ್~ ಆಗುತ್ತಾರೆ. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಮರೆಯಾಗುಷ್ಟು ವೇಗವಾಗಿ ಬೈಕ್ಗಳು ಚಲಿಸುವ ಸಾಮರ್ಥ್ಯ ಹೊಂದಿವೆ. ಅಷ್ಟೇ ಅಲ್ಲ ವೇಗಕ್ಕೆ ತಕ್ಕಂತೆ ಬೈಕಿನಿಂದ ಹೊರ ಬರುವ `ಸುಯ್~ ಎಂಬ `ಶಬ್ದ~ ಅಕ್ಕ ಪಕ್ಕದಲ್ಲಿ ಚಲಿಸುವ ಇತರ ವಾಹನ ಸವಾರರನ್ನು ಗಾಬರಿಗೊಳಿಸುತ್ತವೆ.

ಈ ಹೆದ್ದಾರಿಯಲ್ಲಿ ರಸ್ತೆ ತಡೆಗಳು ಕಡಿಮೆ ಇರುವುದರಿಂದ ಸಿಲಿಕಾನ್ ಸಿಟಿಯ ಯುವಕರು ಶೋಕಿ ರೈಡ್ಗೆ ಈ ರಸ್ತೆಯನ್ನು ಆಯ್ದುಕೊಂಡಿದ್ದಾರೆ. ಇವರ ವೇಗಕ್ಕೆ ಕಡಿವಾಣ ಹಾಕುವಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಪೊಲೀಸರು ವಿಫಲರಾಗಿದ್ದಾರೆ. ಅಂದಹಾಗೆ, ಈ ಬೈಕ್ ಸವಾರಿ ಮಾಡುವ ಯುವಕರು ಪ್ರತಿ ವಾರಾಂತ್ಯದಂದು ಬೆಳಿಗ್ಗೆಯ ತಿಂಡಿ ತಿನ್ನಲು ಹಾಗೂ ಕಾಫಿ ಹೀರಲು ಬೆಂಗಳೂರಿನಿಂದ ಈ ಮಾರ್ಗದಲ್ಲಿ `ಸುಯ್~ ಎಂದು ಬಂದು, `ಸುಯ್~ ಎಂದು ವಾಪಸಾಗುತ್ತಿದ್ದಾರೆ.

ಸಾರ್ವಜನಿಕರ ಎದೆಯಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಬೈಕ್ ಸವಾರಿ ಮಾಡುವ ಈ ಯುವ ಪಡೆಗೆ ಕಳೆದ ಭಾನುವಾರ ಕಾನೂನಿನ `ಬಿಸಿ~ ಮುಟ್ಟಿದೆ. ಮದ್ದೂರು ಬಳಿ ಸಾರ್ವಜನಿಕರೊಬ್ಬರ ಪಕ್ಕದಲ್ಲಿ ಈ ಸವಾರರು ಹಾದು ಹೋದಾಗ ಭಯಗೊಂಡ ಅವರು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಕಾನೂನು ಉಲ್ಲಂಘಿಸಿ ಅತಿವೇಗವಾಗಿ ಬೈಕ್ ಓಡಿಸುವ ಹುಡುಗರನ್ನು ಹಿಡಿಯಲು ಬಿಡದಿ, ರಾಮನಗರ, ಚನ್ನಪಟ್ಟಣ ಪೊಲೀಸರು ಹರಸಾಹಸ ಮಾಡಿದ್ದಾರೆ. ಕೊನೆಗೆ ರಾಮನಗರ ಮತ್ತು ಬಿಡದಿ ಬಳಿ ಬ್ಯಾರಿಕೇಡ್ ಅಡ್ಡ ಹಾಕಿದ ಪರಿಣಾಮ ಎರಡೂ ಕಡೆ ತಲಾ ನಾಲ್ವರು ಬೈಕ್ ಸವಾರರು (ಒಟ್ಟು 8) ಸೆರೆ ಸಿಕ್ಕಿದ್ದಾರೆ. ಉಳಿದ ನಾಲ್ವರು ಸವಾರರು ತಪ್ಪಿಸಿಕೊಂಡಿದ್ದಾರೆ.

ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗದ ನಿಯಮವನ್ನು ಉಲ್ಲಂಘಿಸಿ ಸಂಚರಿಸಿದ್ದಕ್ಕೆ ಬೈಕಿಗೆ ತಲಾ 500 ರೂಪಾಯಿ ದಂಡ ವಿಧಿಸಲಾಗಿದೆ. ಪ್ರತಿ ವಾರ ಈ ಯುವಕರು ವೇಗದಲ್ಲಿ ಬೈಕ್ ಸವಾರಿ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಅಧಿಕ ದಂಡವನ್ನು ವಿಧಿಸಿ, ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿವೈಎಸ್ಪಿ ರಾಮಕೃಷ್ಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.