ಭಾನುವಾರ, ಫೆಬ್ರವರಿ 28, 2021
31 °C

ವೇಟ್‌ಲಿಫ್ಟಿಂಗ್‌: ರುಸ್ಲಾನ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೇಟ್‌ಲಿಫ್ಟಿಂಗ್‌: ರುಸ್ಲಾನ್‌ಗೆ ಚಿನ್ನ

ರಿಯೊ ಡಿ ಜನೈರೊ (ರಾಯಿಟರ್ಸ್‌):  ‘ಪ್ರೈಡ್‌ ಆಫ್‌ ಉಜ್ಬೆಕಿಸ್ತಾನ’ ಎಂಬ ಬಿರುದಿನೊಂದಿಗೆ ಖ್ಯಾತಿ ಪಡೆದಿರುವ ರುಸ್ಲಾನ್‌ ನೂರುದಿನೋವ್‌ ಅವರು ರಿಯೊ ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಪುರುಷರ 105 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದರು.ಸೋಮವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅವರು ಒಟ್ಟು 431 ಕೆ.ಜಿ. ಭಾರ ಎತ್ತಿದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು.ಅರ್ಮೇನಿಯದ ಯುವ ಸ್ಪರ್ಧಿ ಸೈಮನ್‌ ಮಾರ್ಟಿರೊಸ್ಯಾನ್‌ ಅಚ್ಚರಿಯ ಪ್ರದರ್ಶನ ನೀಡಿ ಬೆಳ್ಳಿ ಗೆದ್ದರು. 19ರ ಹರೆಯದ ಸೈಮನ್‌ ಒಟ್ಟು 417 ಕೆ.ಜಿ. ಭಾರ ಎತ್ತಿದರು.ಏಪ್ರಿಲ್‌ ತಿಂಗಳಲ್ಲಿ ನಡೆದಿದ್ದ ಯುರೋಪಿಯನ್‌ ಚಾಂಪಿಯನ್‌ಷಿಪ್‌ ನಲ್ಲಿ ತನ್ನನ್ನು ಸೋಲಿಸಿದ್ದ ಇಬ್ಬರನ್ನು ಹಿಮ್ಮೆಟ್ಟಿಸುವಲ್ಲಿ ಸೈಮನ್‌ ಯಶಸ್ವಿಯಾದರು.ಕಜಕ ಸ್ತಾನದ ಅಲೆಕ್ಸಾಂಡರ್‌ ಝೈಚಿಕೋವ್‌ (416 ಕೆ.ಜಿ.) ಕಂಚಿನ ಪದಕ ಪಡೆದರು.‘ಸಾಕಷ್ಟು ಬಳಲಿದ್ದೇನೆ. ನಿಶ್ಚಿಂತೆಯಿಂದ ನಿದ್ರಿಸಬೇಕು. ಆ ಬಳಿಕ ಬ್ರೆಜಿಲ್‌ನ ಬೀಚ್‌ಗಳಲ್ಲಿ ಸ್ವಲ್ವ ಸುತ್ತಾಡಬೇಕು’ ಎಂದು ರುಸ್ಲಾನ್‌ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಎರಡು ಸಲ ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರುಸ್ಲಾನ್‌ ಇದೀಗ ಚೇತರಿಸಿ ಕೊಂಡು ಅಮೋಘ ಪ್ರದರ್ಶನ ನೀಡಿದ್ದಾರೆ.‘2013 ರಲ್ಲಿ ನನಗೆ ಪ್ರೈಡ್‌ ಆಫ್‌ ಉಜ್ಬೆಕಿಸ್ತಾನ (ಉಜ್ಬೆಕಿಸ್ತಾನದ ಹಿರಿಮೆ) ಪ್ರಶಸ್ತಿ ದೊರೆತಿತ್ತು’ ಎಂದು ಅವರು ಹೇಳಿದ್ದಾರೆ. 24ರ ಹರೆಯದ ವೇಟ್‌ ಲಿಫ್ಟರ್‌ ಆ ವರ್ಷ ಏಷ್ಯನ್‌, ವಿಶ್ವ ಮತ್ತು ಯುನಿವರ್ ಸಿಯಾಡ್‌ ಚಾಂಪಿಯನ್‌ ಷಿಪ್‌ಗಳಲ್ಲಿ ಚಿನ್ನ ಗೆದ್ದಿದ್ದರು.‘ಹೀರೊ ಆಫ್‌ ಉಜ್ಬೆಕಿಸ್ತಾನ ಎಂಬ ಇನ್ನೊಂದು ಪ್ರಶಸ್ತಿ ಇದೆ. ಆದರೆ ಆ ಗೌರವ ಪಡೆಯುವುದು ಸುಲಭವಲ್ಲ. ಈ ಚಿನ್ನದ ಪದಕಕ್ಕೂ ಆ ಪ್ರಶಸ್ತಿ ದೊರೆಯದು. ಆದರೆ ಟೋಕಿಯೊದಲ್ಲಿ (2020ರ ಒಲಿಂಪಿಕ್ಸ್‌) ಚಿನ್ನ ಗೆದ್ದರೆ ಆ ಅತ್ಯುನ್ನತ ಪ್ರಶಸ್ತಿ ದೊರೆಯುವ ವಿಶ್ವಾಸವಿದೆ’ ಎಂದಿದ್ದಾರೆ.ಮುಖ್ಯಾಂಶಗಳು

* 105 ಕೆ.ಜಿ. ವಿಭಾಗದಲ್ಲಿ ರುಸ್ತಾನ್‌ ಈ ಸಾಧನೆ

* ಎರಡು ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಲಿಫ್ಟರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.