ಶುಕ್ರವಾರ, ಮೇ 7, 2021
22 °C

ವೇಟ್ ಲಿಫ್ಟಿಂಗ್: ಭಾರತಕ್ಕೆ 4 ಕಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಸಂಜೀತಾ ಚಾನು ಹಾಗೂ ಯುಕಾರ್ ಸಿಬಿ ಅವರು ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಜೂನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಮೊದಲ ದಿನ ಒಟ್ಟು ನಾಲ್ಕು ಕಂಚಿನ ಪದಕಗಳನ್ನು ಭಾರತಕ್ಕೆ ಜಯಿಸಿಕೊಟ್ಟರು.ಶುಕ್ರವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಗಮನ ಸೆಳೆದದ್ದು ಸಂಜೀತಾ ಚಾನು. ಅವರು 48 ಕೆ.ಜಿ ಸ್ಪರ್ಧೆಯ ಸ್ನ್ಯಾಚ್ (71 ಕೆಜಿ), ಕ್ಲೀನ್ ಮತ್ತು ಜರ್ಕ್ (90ಕೆಜಿ) ಹಾಗೂ ಒಟ್ಟಾರೆ (161 ಕೆ.ಜಿ) ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಪುರುಷರ 62 ಕೆ.ಜಿ ವಿಭಾಗದ ಕ್ಲೀನ್ (151ಕೆಜಿ) ಸ್ಪರ್ಧೆಯಲ್ಲಿ ಯುಕಾರ್ ಸಿಬಿ ಅವರು ಕಂಚು ಗೆದ್ದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.