ಶನಿವಾರ, ಮೇ 15, 2021
23 °C

ವೇತನಕ್ಕಾಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಐದು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಕಾವೇರಿ ನಿಗಮದಲ್ಲಿ ದಿನಗೂಲಿ ನೌಕರರಾಗಿರುವ ಸೌಡಿಗಳು ಸೋಮವಾರ ತಾಲ್ಲೂಕಿನ ಕಾಗೆಪುರ ಬಳಿಯಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಕಚೇರಿ  ಪ್ರತಿಭಟನೆ ನಡೆಸಿದ  ಸೌಡಿಗಳು ಕೆ.ಆರ್.ಎಸ್. ನಾಲಾ ಆಧುನೀಕರಣ, ನೀರು ನಿರ್ವಹಣೆ ಸೇರಿದಂತೆ ತಳಗವಾದಿ, ಕಿರುಗಾವಲು, ಭಾರತೀನಗರದ ವ್ಯಾಪ್ತಿಯಲ್ಲಿ 115 ಕ್ಕೂ ಹೆಚ್ಚು ಮಂದಿ  ಕೆಲಸ ಮಾಡುತ್ತಿದ್ದು  5 ತಿಂಗಳಿನಿಂದ ವೇತನ ಇಲ್ಲದೆ ಜೀವನ ನಡೆಸುವುದು ದುಸ್ತರ ವಾಗಿದೆ.ಕೂಡಲೇ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಸುವುದ್ದಾಗಿ ಹೇಳಿದರು.ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಪರಶಿವಮೂರ್ತಿ ಅವರು ವೇತನ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದ್ದಾಗಿ ತಿಳಿಸಿದರು. ಇದಕ್ಕೆ ಒಪ್ಪದ ನೌಕರರು ಈ ಬಗೆ ಹಿಂದೆ ಸಹ ಪ್ರತಿಭಟನೆ  ವೇಳೆ ಇದೇ ರೀತಿಯ ಭರವಸೆಯನ್ನು ನೀಡಲಾಗಿತ್ತು, ಆದರೆ ವೇತನ ಮಾತ್ರ ಬರಲಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು  ಈಗ ಸಂಪೂರ್ಣ ಬಿಡುಗಡೆ  ಆಗುವರೆಗೂ  ಪ್ರತಿಭಟನೆ ನಿಲ್ಲುವುದಿಲ್ಲ ಎಂದರು.ಕಾರ್ಯನಿರ್ವಾಹಕ ಎಂಜಿನಿ ಯರ್  ಅವರು ಮಾತನಾಡಿ ಮೊದಲು ಕೆಲವು ಮುಖಂಡರು ಬನ್ನಿ ಮುಖ್ಯ ಎಂಜಿನಿಯರ್ ಜತೆ  ಅವರೊಡನೆ ಮಾತನಾಡೋಣ ನಂತರ ಮುಂದಿನ ಕ್ರಮದ ಚರ್ಚೆ ಮಾಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.

ಉಪಾಧ್ಯಕ್ಷ ಬೋರೇಗೌಡ, ಮಾದೇಗೌಡ, ಕೃಷ್ಣ, ನಾಗೇಂದ್ರ, ವಿಘ್ನೇಶ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.