ಮಂಗಳವಾರ, ಆಗಸ್ಟ್ 11, 2020
27 °C

ವೇಶ್ಯಾವಾಟಿಕೆ: ಪೊಲೀಸರ ಬಲೆಗೆ ಬಿದ್ದ ಸಹನಟಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇಬ್ಬರು ಸಹ ನಟಿಯರು ಸೇರಿದಂತೆ ನಾಲ್ಕು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಸುಮಾ(29), ಲಕ್ಷ್ಮಿ(40), ಶ್ರೀನಿವಾಸ(34) ಮತ್ತು ಪುರುಷೋ ತ್ತಮ (25) ಬಂಧಿತರು. ಸುಮಾ ಹೊರ ತುಪಡಿಸಿ ಉಳಿದವರು ಬ್ರೋಕರ್‌ಗಳಾ ಗಿದ್ದಾರೆ. 20 ಸಾವಿರ ರೂಪಾಯಿಗೆ ಗಿರಾಕಿ ಜತೆ ವ್ಯವಹಾರ ಕುದುರಿಸಿದ್ದ ಆರೋಪಿಗಳು ಪಶ್ಚಿಮ ಕಾರ್ಡ್ ರಸ್ತೆ ಯ ಹೋಟೆಲ್‌ವೊಂದರಲ್ಲಿ ಕೊಠಡಿ ಕಾಯ್ದಿರಿಸಿ ಅಲ್ಲಿಗೆ ಬರುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಎಲ್ಲರನ್ನೂ ಬಂಧಿಸಲಾಯಿತು ಎಂದು ಪೊಲೀ ಸರು ತಿಳಿಸಿದ್ದಾರೆ.ನಾಗರಬಾವಿ ನಿವಾಸಿ ಸುಮಾ  `ಸ್ಯಾಂಡಲ್‌ವುಡ್~ ಮತ್ತು `ಆರ್ಭಟ~ ಚಿತ್ರದಲ್ಲಿ ನಟಿಸಿದ್ದಾರೆ. ರಂಗೋಲಿ, ಮಾಂಗಲ್ಯ, ಬದುಕು ಮುಂತಾದ ಧಾರಾ ವಾಹಿಗಳಲ್ಲಿಯೂ ಅವರು ಅಭಿನಯಿ ಸಿದ್ದಾರೆ. `ಆರ್ಭಟ~ ಚಿತ್ರದಲ್ಲಿ ಉಪನ್ಯಾ ಸಕಿ ಪಾತ್ರ ಮತ್ತು `ಸ್ಯಾಂಡಲ್‌ವುಡ್~  ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಿ ಸಿದ್ದಾರೆ. ಮಾಗಡಿ ರಸ್ತೆ ನಿವಾಸಿಯಾದ ಲಕ್ಷ್ಮಿ , `ರಾಧಿಕಾ~ ಮತ್ತು `ಕುಂಕುಮ ಭಾಗ್ಯ~ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಪೊಲೀ ಸರು ಹೇಳಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ರವಿ ಎಂಬಾತ ಪರಾರಿ ಯಾಗಿದ್ದಾನೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಡಿಸಿಪಿ ಕೃಷ್ಣಂ ರಾಜು ಮಾರ್ಗದರ್ಶನದಲ್ಲಿ ಎಸಿಪಿ ಲಕ್ಷ್ಮಣ್ ತಂಡ  ಇವರನ್ನು ಬಂಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.