ತುಮಕೂರು: ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಬೇಕು ಎಂಬುದು ಬಹುದಿನದ ಕನಸು ಈ ವರ್ಷವೂ ಈಡೇರುವ ಲಕ್ಷಣ ಕಾಣುತ್ತಿಲ್ಲ.

ಹಿಂದಿನ ವರ್ಷ ಕಾಲೇಜು ಮಂಜೂರಾದರೂ ಕೂಡ ನಂತರದ ಪ್ರಕ್ರಿಯೆಗಳು ನಡೆಯಲಿಲ್ಲ. ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಘೋಷಣೆ ಮಾಡಿದ್ದೊಂದೇ ಸಾಧನೆ ಎಂಬಂತಾಗಿದೆ.

ಚಾಮರಾಜನಗರ, ಕೊಡಗು, ಕಾರವಾರ ಜಿಲ್ಲೆಗಳಲ್ಲಿ ಕಾಲೇಜು ನಿರ್ಮಾಣ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ಕಳೆದ ವಾರ ಹಸಿರು ನಿಶಾನೆ ತೋರಿದೆ.

ಆದರೆ, ತುಮಕೂರು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಇನ್ನೂ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಕಾಲೇಜು ಸ್ಥಾಪನೆ ಇನ್ನಷ್ಟು ವಿಳಂಬ ಆಗಲಿದೆ.

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಜೆಟ್ನಲ್ಲಿ ಹಣ ಮಂಜೂರಾತಿ ದೊರಕಿದೆ. ಆದರೆ, ನಂತರ ಯಾವ ಕಾರ್ಯಗಳೂ ನಡೆದಿಲ್ಲ. 10 ತಾಲ್ಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ವೈದ್ಯಕೀಯ ವಿದ್ಯಾರ್ಥಿಗಳಿಗಷ್ಟೇ ಪ್ರಯೋಜನವಾಗುವುದಿಲ್ಲ. ಬೋಧಕ ಆಸ್ಪತ್ರೆಯೂ ನಿರ್ಮಾಣವಾಗುವುದರಿಂದ ಜಿಲ್ಲೆಯ ಜನತೆಗೆ ಹೆಚ್ಚಿನ ಆರೋಗ್ಯ ಸೇವೆ ದೊರಕಲಿದೆ.

ಸದ್ಯ ನಗರದಲ್ಲಿ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಆದರೆ, ಸರ್ಕಾರಿ ಕಾಲೇಜು ಸ್ಥಾಪನೆಯಾದರೆ ಇನ್ನಷ್ಟು ಆರೋಗ್ಯ ಸೇವೆ ಲಭಿಸುತ್ತದೆ. ಜನಸಾಮಾನ್ಯರು ಖಾಸಗಿ ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ, ಬೆಂಗಳೂರಿನ ಆಸ್ಪತ್ರೆಗಳಿಗೆ ತೆರಳುವುದು ತಪ್ಪುತ್ತದೆ.

ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ, ಉಚಿತ ಆರೋಗ್ಯ ಚಿಕಿತ್ಸೆಯಂಥ ಸೇವೆಗಳು ದೊರಕುತ್ತವೆ. ಹೀಗಾಗಿ, ಸರ್ಕಾರಿ ವೈದ್ಯಕೀಯ ಕಾಲೇಜನ್ನು ತ್ವರಿತವಾಗಿ ಆರಂಭಿಸಬೇಕು ಎಂಬುದು ಜಿಲ್ಲೆಯ ಜನತೆಯ ಒತ್ತಾಸೆಯಾಗಿದೆ.

800 ಕೋಟಿ ಬೇಕು: ಪೂರ್ಣ ಪ್ರಮಾಣದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕನಿಷ್ಠ ₹ 800 ಕೋಟಿ ಅಗತ್ಯ ಇದೆ. ಕಟ್ಟಡ ನಿರ್ಮಾಣ, ಬೋಧಕ ಆಸ್ಪತ್ರೆ, ವೈದ್ಯರು ಮತ್ತು ಸಿಬ್ಬಂದಿ ನೇಮಕ ಆಗಬೇಕು. ಕೆಲವೇ ದಿನಗಳಲ್ಲಿ ಆಗುವಂತ ಪ್ರಕ್ರಿಯೆಗಳಲ್ಲ.

ಕಾಲೇಜು ಕಟ್ಟಡ ನಿರ್ಮಾಣ ಆರಂಭಗೊಂಡರೂ ಪೂರ್ಣವಾಗಲು ಕನಿಷ್ಠ ಒಂದೆರಡು ವರ್ಷ ಬೇಕಾಗುತ್ತದೆ. ಆದರೆ, ಕಾಲೇಜು ಘೋಷಣೆಯಾಗಿ, ಬಜೆಟ್ನಲ್ಲಿ ಹಣಕಾಸು ಮಂಜೂರಾತಿ ದೊರಕಿದ್ದು ಬಿಟ್ಟರೆ ಏನೂ ಬೆಳವಣಿಗೆ ಆಗದೇ ಇರುವುದರಿಂದ ವೈದ್ಯಕೀಯ ಕಾಲೇಜು ನಿರ್ಮಾಣ ಕನಸು ನನಸಾಗುವುದು ಇನ್ನಷ್ಟು ತಡವಾಗಬಹುದು.

ಯೋಜನೆ ಸಿದ್ಧವಾಗಿದೆ
ವೈದ್ಯಕೀಯ ಕಾಲೇಜು ಸ್ಥಾಪನೆ ಖಚಿತ. ಕಾಲೇಜು ನಿರ್ಮಾಣಕ್ಕೆ ಸಾರ್ವಜನಿಕ ಆಸ್ಪತ್ರೆ ಪಕ್ಕ 24 ಎಕರೆ ಪ್ರದೇಶ ಗುರುತಿಸಲಾಗಿದೆ. ಯೋಜನೆ ರೂಪಿಸಿ ನೀಲನಕ್ಷೆ ಸಿದ್ಧಪಡಿಸಿದೆ. ಸರ್ಕಾರ ಕಾಮಗಾರಿ ಪ್ರಾರಂಭಕ್ಕೆ ಅನುದಾನ ಬಿಡುಗಡೆ ಮಾಡುವುದು ಮಾತ್ರ ಬಾಕಿ ಇದೆ. ಈ ವರ್ಷ ಮೂರು ಜಿಲ್ಲೆಗಳ ಕಾಲೇಜುಗಳಿಗೆ ಅನುದಾನ ಘೋಷಣೆ ಮಾಡಿದೆ. ಹಂತ ಹಂತವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಆರಂಭಿಕವಾಗಿ ಸರ್ಕಾರ ₹ 150 ಕೋಟಿ ಬಿಡುಗಡೆ ಮಾಡುತ್ತದೆ. ಮುಂದಿನ ವರ್ಷ ಕಾಲೇಜು ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಫೀಕ್ ಅಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವುದೂ ಇಲ್ಲ...
ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗಿ ಬಜೆಟ್ ಮಂಜೂರಾತಿ ದೊರಕಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಆದ್ಯತಾನುಸಾರ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ತ್ವರಿತ ಪ್ರಕ್ರಿಯೆ ನಡೆದಿವೆ. ನಂತರ ತುಮಕೂರು ಸೇರಿದಂತೆ ಸರ್ಕಾರ ಗುರುತಿಸಿರುವ ಜಿಲ್ಲೆಗಳಲ್ಲಿ ಕಾಲೇಜು ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ದೊರಕಬಹುದು. ಈಗ ತುಮಕೂರು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸರ್ಜನ್ ಡಾ.ಈಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.