ಭಟ್ಕಳ: ಎಲ್ಲ ಧರ್ಮಗಳು ಶಾಂತಿ ಪ್ರೀತಿಯನ್ನು ಸಾರುತ್ತದೆ. ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ನಾವು ನಮ್ಮನ್ನು ಪ್ರೀತಿಸುವಂತೆ ಎಲ್ಲರನ್ನೂ ಪ್ರೀತಿಸುವಂತಾಗಬೇಕು ಎಂದು ಜಮಾತೆ ಇಸ್ಲಾಮಿ ಹಿಂದ್ನ ಪ್ರಮುಖ ಅಕ್ಬರ್ ಅಲಿ ಹೇಳಿದರು.

ಮುರ್ಡೇಶ್ವರದ ಆರ್.ಎನ್.ಎಸ್.ಪಿ. ಯು ಕಾಲೇಜಿನಲ್ಲಿ ಹ್ಯೂಮಾನಿಟಿ ಸೊಸೈಟಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು. ಡಾ. ವಾದಿರಾಜ ಭಟ್, ಜಗತ್ತಿನಲ್ಲಿ ಹಲವು ಧರ್ಮಗಳು ಇದ್ದರೂ ಸಹ ಎಲ್ಲ ಧರ್ಮಗಳು ಸಾರುವ ಸಂದೇಶ ಒಂದೇ ರೀತಿಯಲ್ಲಿರುತ್ತದೆ. ನಾವೆಲ್ಲರೂ ವಸುದೈವ ಕುಟುಂಬದಂತೆ ಬಾಳಬೇಕು ಎಂದರು.

ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಈಶ್ವರ ನಾಯ್ಕ, ಪಿ.ಯು.ಕಾಲೇಜಿನ ಪ್ರಾಂಶುಪಾಲ ಮಾಧವ ಪಿ, ಹ್ಯೂಮಾನಿಟಿ ವೆಲ್ಫೇರ್ ಟ್ರಸ್ಟ್ನ ಡಾ. ಅಮೀನುದ್ದೀನ್, ಜೋಹರ್ಸಾಬ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸುನೀಲ್ ಜತ್ತನ್, ಡಾ. ಹರಿಪ್ರಸಾದ ಕಿಣಿ, ಗಜಾನನ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಕೂಟದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.