ಮಂಗಳವಾರ, ಏಪ್ರಿಲ್ 20, 2021
29 °C

ವೊಡಾಫೋನ್ ಕಾರು ನಗರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೊಡಾಫೋನ್ ಆಯೋಜಿಸಿರುವ `ವೊಡಾಫೋನ್ ಮೆಕ್ಲಾರೆನ್ ಮರ್ಸಿಡೆಸ್ ಎಫ್1~ ರೇಸ್ ಕಾರನ್ನು ಕಣ್ತುಂಬಿಕೊಳ್ಳುವ ಆಸೆ ನಿಮಗಿದ್ದರೆ ನಗರದ ಆಯ್ದ ಕೆಲವು ಮಾಲ್‌ಗಳಲ್ಲಿ ಪೂರೈಸಿಕೊಳ್ಳಬಹುದು.ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಈ ರೇಸ್‌ನಲ್ಲಿ ಪಾಲ್ಗೊಳ್ಳಲಿರುವ ಬೆಂಜ್ ರೇಸ್ ಕಾರಿನದೇ ಪಡಿಯಚ್ಚಿನಂಥ ಕಾರನ್ನು ನಗರದ ಕಾರುಪ್ರಿಯರ, ರೇಸ್‌ಪ್ರಿಯರ ಮನತಣಿಸಲು ವೊಡಾಫೋನ್ ತಂದಿರಿಸಿದೆ.ಫೋರಂ ಮಾಲ್‌ನಲ್ಲಿ ಮೊದಲ `ಪ್ರದರ್ಶನ~ ಈಗಾಗಲೇ ನಡೆದಿದ್ದು, ಆ.17ರಂದು ಮಲ್ಲೇಶ್ವರದ ಮಂತ್ರಿ ಮಾಲ್, 18ರಂದು ಜೆ.ಪಿ.ನಗರದ ಸೆಂಟ್ರಲ್ ಹಾಗೂ ಮಲ್ಲೇಶ್ವರದ ಒರಾಯನ್ ಮಾಲ್‌ನಲ್ಲಿ ವೀಕ್ಷಣೆಗೆ ಲಭ್ಯ. ಪಕ್ಕ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳಲೂ ಅವಕಾಶವಿದೆ.ಆ.19ರಿಂದ 24ರವರೆಗೂ ವೈಟ್‌ಫೀಲ್ಡ್‌ನ ಐಐಟಿಪಿಎಲ್ ಮತ್ತು ಹೊರ ವರ್ತುಲ ರಸ್ತೆಯ ಎಕೋಸ್ಪೇಸ್, ಇದೇ ಪ್ರದೇಶದಲ್ಲಿರುವ ಮಾನ್ಯತಾ, ಕೋರಮಂಗಲದ ಬಾಗೇಮನೆ,  ದೊಮ್ಮಲೂರಿನ ಎಂಬೆಸಿ ಗಾಲ್ಫ್ ಲಿಂಕ್ಸ್ ಕಂಪೆನಿಯ ಕ್ಯಾಂಪಸ್‌ಗೆ ಲಗ್ಗೆಯಿಡಲಿದೆ. ಎಲ್ಲಾ ಕಡೆ ವೀಕ್ಷಣೆ ಸಮಯ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ. ವಿವರಕ್ಕೆ: 98198 18462. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.