ವೋಟಿಗಾಗಿ ನೋಟು ಹಗರಣ:ಬಯಲಿಗೆಳೆದವರಿಗೆ ಪದ್ಮ ಪ್ರಶಸ್ತಿ ನೀಡಬೇಕು

7

ವೋಟಿಗಾಗಿ ನೋಟು ಹಗರಣ:ಬಯಲಿಗೆಳೆದವರಿಗೆ ಪದ್ಮ ಪ್ರಶಸ್ತಿ ನೀಡಬೇಕು

Published:
Updated:

ಪಣಜಿ (ಐಎಎನ್‌ಎಸ್): `ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಬಿಜೆಪಿ ಮತ್ತು ಇತರ ಸಂಸತ್ ಸದಸ್ಯರಿಗೆ  ಪದ್ಮ ಪ್ರಶಸ್ತಿ ನೀಡಬೇಕಿತ್ತು~ ಎಂದು ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಶುಕ್ರವಾರ ಹೇಳಿದ್ದಾರೆ.

ಗೋವಾದಲ್ಲಿ ಎಲ್.ಕೆ ಅಡ್ವಾಣಿ ಅವರ ರಥ ಯಾತ್ರೆಯು ಹಾದುಹೋಗಲಿರುವ  ಹಿನ್ನೆಲೆಯಲ್ಲಿ ಸಿದ್ಧತೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಪಣಜಿಯಲ್ಲಿರುವ ಬಿಜೆಪಿ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು, `ಈ ಹಗರಣದಿಂದ ಲಾಭ ಪಡೆದಿರುವವರನ್ನು ಗುರಿಯಾಗಿಸುವುದನ್ನು ಬಿಟ್ಟು, ಕೇಂದ್ರ ಸರ್ಕಾರವು ಆಡಳಿತ ಯಂತ್ರವನ್ನು ಬಳಸಿಕೊಂಡು  ಹಗರಣವನ್ನು ಬಯಲು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ~ ಎಂದು ಕಿಡಿ ಕಾರಿದರು.

`ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಯುಪಿಎ ಲಂಚ ಸಂಸದರಿಗೆ ಲಂಚ ನೀಡಿತ್ತು. ಈ ವಂಚನೆಯನ್ನು ಬಯಲಿಗೆಳೆದ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕಿತ್ತು~ ಎಂದು ಹೇಳಿದರು.

`ದುಡ್ಡನ್ನು ಸಂಸತ್‌ಗೆ ತಂದು ಹಗರಣ ಬಯಲು ಮಾಡಿದ್ದಕ್ಕೆ ನಮ್ಮ ಸಂಸದರನ್ನು ಅಭಿನಂದಿಸಬೇಕಿತ್ತು. ಬದಲಿಗೆ ಅವರು ಸಂಸತ್‌ಗೆ ಕಳಂಕ ತಂದರು ಎನ್ನಲಾಯಿತು~ ಎಂದು ನಾಯ್ಡು ದೂರಿದರು.

ಈ ಪ್ರಕರಣದಲ್ಲಿ ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಕೇಂದ್ರವು ದೆಹಲಿ ಪೊಲೀಸರನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ ಎಂದೂ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry