ಭಾನುವಾರ, ಮೇ 22, 2022
29 °C

ಶಂಕರಪ್ಪ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಶಾಸಕ ಎನ್. ಶಂಕರಪ್ಪ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭಾನುವಾರ ಪ್ರಕಟಿಸಿದರು. ಅಧಿಕೃತ ಆದೇಶ ಶೀಘ್ರ ಹೊರಬೀಳಲಿದೆ.

ಸದಾನಂದ ಗೌಡ ಅವರಿಗಾಗಿ ವಿಧಾನ ಪರಿಷತ್ ಸದಸ್ಯತ್ವವನ್ನು ತೆರವು ಮಾಡಿದ ಶಂಕರಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಈ ಮೂಲಕ ಒಂದೂಕಾಲು ವರ್ಷದಿಂದ ಅನಾಥವಾಗಿದ್ದ ಆಯೋಗಕ್ಕೆ ಜೀವ ಬಂದಂತಾಗಿದೆ. ಶಂಕರಪ್ಪ ಅವರ ಅವಧಿ ಮೂರು ವರ್ಷ. ವಾರದಲ್ಲಿ ಸದಸ್ಯರನ್ನು ನೇಮಕ ಮಾಡುವ ಸಂಭವ ಇದೆ.

ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್.ದ್ವಾರಕಾನಾಥ್ ಅವರ ಅವಧಿ 2010ರ ಜುಲೈನಲ್ಲಿ ಮುಕ್ತಾಯಗೊಂಡ ನಂತರ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.