ವಾಷಿಂಗ್ಟನ್ (ಪಿಟಿಐ): ಭಾರತ ಮೂಲದ ಉಗ್ರಗಾಮಿ ಚಟುವಟಿಕೆ ನಡೆಸಲು ಸಿಖ್ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡಿದ ಆರೋಪದ ಮೇಲೆ ಅಮೆರಿಕ ಕೇಂದ್ರೀಯ ತನಿಖಾ ಸಂಸ್ಥೆ (ಎಫ್ಬಿಐ) ಭಾರತೀಯ ಮೂಲದ ಅಮೆರಿಕ ಪ್ರಜೆ ಬಲ್ವಿಂದರ್ ಸಿಂಗ್ ಎಂಬಾತನನ್ನು ಬಂಧಿಸಿದೆ. ಸಿಖ್ ಉಗ್ರಗಾಮಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ (ಬಿಕೆಐ), ಖಾಲಿಸ್ತಾನ ಜಿಂದಾಬಾದ್ ಫೋರ್ಸ್ (ಕೆಝ್ಎಫ್)ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನುವ ಆರೋಪ ಸಿಂಗ್ ಮೇಲಿದೆ.

‘ಅಮೆರಿಕದ ಮಿತ್ರ ರಾಷ್ಟ್ರವನ್ನು ಗುರಿಯಾಗಿಸಿಕೊಂಡು ವಿದೇಶಿ ಉಗ್ರಗಾಮಿ ಸಂಘಟನೆಗಳು ನಡೆಸುವ ಕಾರ್ಯಾಚರಣೆಗೆ ಸಿಂಗ್ ನೆರವಾಗುತ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಎಫ್ಬಿಐನ ಅಧಿಕಾರಿ ಲೌರಾ ಬಚೈಟ್ ತಿಳಿಸಿದ್ದಾರೆ. ಉಗ್ರಗಾಮಿ ಚಟುವಟಿಕೆಗೆ ನೆರವಾಗಲು ಸಹ ಸಂಚುಗಾರರನ್ನು ಭೇಟಿ ಮಾಡಲು ಸಿಂಗ್ ಅಮೆರಿಕದಿಂದ ಪಾಕಿಸ್ತಾನ, ಭಾರತ ಮತ್ತು ಇತರ ದೇಶಗಳಿಗೆ ಹೋಗುತ್ತಿದ್ದ ಎನ್ನುವ ಆರೋಪವೂ ಅವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.