ಭಾನುವಾರ, ಏಪ್ರಿಲ್ 18, 2021
31 °C

ಶಂಶೀರ್‌ಗೆ ನೂತನ ಕೂಟ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಎಸ್.ಇ. ಶಂಶೀರ್ ಇಲ್ಲಿ ಆರಂಭವಾದ 24ನೇ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮೊದಲ ದಿನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಾಲಕರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಶಂಶೀರ್ 7.52 ಮೀ. ದೂರ ಜಿಗಿಯುವಲ್ಲಿ ಯಶಸ್ವಿಯಾದರು. ಈ ಮೂಲಕ ಎಂ. ಅರ್ಶದ್ 2009 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು (7.45 ಮೀ.) ಅವರು ಮುರಿದರು.ಮೊದಲ ವರ್ಷದ ಬಿಬಿಎಂನಲ್ಲಿ ಕಲಿಯುತ್ತಿರುವ ಶಂಶೀರ್ 18 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲೂ ಕೂಟ ದಾಖಲೆ (7.30 ಮೀ.) ಹೊಂದಿದ್ದಾರೆ. ಆಳ್ವಾಸ್ ತಂಡದವರೇ ಆದ ಪ್ರಸಾದ್ (6.95 ಮೀ.) ಮತ್ತು  ಎನ್. ಅಭಿಷೇಕ್ (6.60 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.ಬೆಂಗಳೂರಿನ ಎಸ್‌ಎಐ ಕೇಂದ್ರದ ಆರ್.ಎ. ಮಂಜುಶ್ರೀ ಮಹಿಳೆಯರ 100 ಮೀ. ಓಟವನ್ನು 12.4 ಸೆಕೆಂಡುಗಳಲ್ಲಿ ಪೂರೈಸಿ `ವೇಗದ ಓಟಗಾರ್ತಿ~ ಎನಿಸಿಕೊಂಡರು.ಮೊದಲ ದಿನ ಚಿನ್ನ ಗೆದ್ದವರು:

ಪುರುಷರ ವಿಭಾಗ:
800 ಮೀ. ಓಟ: ವಿಶ್ವಾಂಭರ್ ಕೆ.ಎಲ್ (ಎಸ್‌ಡಬ್ಲ್ಯುಆರ್, ಕಾಲ: 1:55.1 ಸೆ.), ಲಾಂಗ್‌ಜಂಪ್: ಎಂ. ಅರ್ಶದ್ (ಏರ್‌ಫೋರ್ಸ್, ದೂರ: 7.50 ಮೀ.), 4ಷ400 ಮೀ. ಓಟ: ಏರ್‌ಫೋರ್ಸ್, ಬೆಂಗಳೂರು (ಕಾಲ: 3:16.4 ಸೆ.),ಮಹಿಳೆಯರು: 100 ಮೀ. ಓಟ: ಆರ್.ಎ. ಮಂಜುಶ್ರೀ (ಎಸ್‌ಎಐ, ಬೆಂಗಳೂರು; ಕಾಲ: 12.4 ಸೆ.), 800 ಮೀ. ಓಟ: ಸಿ. ಸ್ಮಿತಾ  (ಆಳ್ವಾಸ್, ಮೂಡುಬಿದಿರೆ; ಕಾಲ: 2:21.4 ಸೆ.), ಶಾಟ್‌ಪಟ್: ನೀಲಂ (ರೈಲ್ವೇಸ್; ದೂರ: 12.57 ಮೀ.), ಹೈಜಂಪ್: ಕೆ.ಸಿ. ಚಂದನಾ (ಎಸ್‌ಡಬ್ಲ್ಯುಆರ್; ಎತ್ತರ: 1.73 ಮೀ.), ಜಾವೆಲಿನ್ ಥ್ರೋ: ಶಾಹಿ ಜಹಾನಿ (ಎಲ್‌ಐಸಿ, ಮೈಸೂರು; ದೂರ: 42.95 ಮೀ.),ಬಾಲಕರ ವಿಭಾಗ: 20 ವರ್ಷ ವಯಸ್ಸಿನೊಳಗಿನವರು: 800 ಮೀ. ಓಟ: ಯೆರಯ್ಯಾ (ಡಿವೈಎಸ್‌ಎಸ್, ಬೆಂಗಳೂರು; ಕಾಲ: 1:58.7 ಸೆ.), ಲಾಂಗ್‌ಜಂಪ್: ಶಂಶೀರ್ ಎಸ್.ಇ (ಆಳ್ವಾಸ್; ದೂರ: 7.52 ಮೀ. ಕೂಟ ದಾಖಲೆ), ಜಾವೆಲಿನ್ ಥ್ರೋ: ಜಿಬಿನ್ (ಎಂಇಜಿ, ದೂರ: 59.80 ಮೀ.), 4ಷ400 ಮೀ. ರಿಲೇ: ಆಳ್ವಾಸ್ ಮೂಡುಬಿದಿರೆ (ಕಾಲ: 3:36.5 ಸೆ.)18 ವರ್ಷ: 800 ಮೀ. ಓಟ: ಆರ್.ಆರ್. ರಾಕೇಶ್ (ಯುವ- ಬೆಂಗಳೂರು; ಕಾಲ: 1:59.1 ಸೆ.), ಡಿಸ್ಕಸ್ ಥ್ರೋ: ಸಾಯಿರಾಜ್ (ಆಳ್ವಾಸ್; ದೂರ: 42.50 ಮೀ), ಹೈಜಂಪ್: ಜೆಸ್ಸಿ ಸಂದೇಶ್ (ಎ.ಟಿ ಮತ್ತು ಎಫ್; ಎತ್ತರ: 2.06 ಮೀ), ಲಾಂಗ್‌ಜಂಪ್: ಮೋಹಿತ್ ಕುಮಾರ್ ಚವಾಣ್ (ಡಿವೈಎಸ್‌ಎಸ್, ಬೆಂಗಳೂರು; ದೂರ: 7.02 ಮೀ.), ಮೆಡ್ಲೆ ರಿಲೇ: ಆಳ್ವಾಸ್ ಮೂಡುಬಿದಿರೆ (ಕಾಲ: 2:05.1 ಸೆ.),16 ವರ್ಷ : 1000 ಮೀ. ಓಟ: ಬಿ. ಶರತ್ (ಡಿವೈಎಸ್‌ಎಸ್- ಕೂಡಿಗೆ, ಕಾಲ: 2:42.7 ಸೆ.), ಡಿಸ್ಕಸ್ ಥ್ರೋ: ಶರತ್ ಬಿ. (ದಾವಣಗೆರೆ; ದೂರ: 31.91 ಮೀ.), ಹೈಜಂಪ್: ಡಿ.ಎಸ್. ರವಿತೇಜ್ (ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು; ಎತ್ತರ: 1.78 ಮೀ.), ಮೆಡ್ಲೆ ರಿಲೇ: ದಕ್ಷಿಣ ಕನ್ನಡ (ಕಾಲ: 2:09.3 ಸೆ.)

14 ವರ್ಷ: ಹೈಜಂಪ್: ಚೇತನ್ (ಎಸ್‌ಡಿಎಂ, ಉಜಿರೆ; ಎತ್ತರ: 1.38 ಮೀ.)ಬಾಲಕಿಯರ ವಿಭಾಗ: 20 ವರ್ಷ: 800 ಮೀ. ಓಟ: ಎಚ್. ಫರ್ಹೀನಾ ಶೇಖ್ (ಎಸ್‌ಟಿಎಸ್ ಬೆಳಗಾವಿ; 2:22.4 ಸೆ.), ಶಾಟ್‌ಪಟ್: ಯು. ನಿಶಾ (ಆಳ್ವಾಸ್; ದೂರ: 10.75 ಮೀ.), ಹೈಜಂಪ್: ಪಿ.ಬಿ. ಸುಮಿತ್ರಾ (ಡಿವೈಎಸ್‌ಎಸ್, ಮೈಸೂರು; ಎತ್ತರ: 1.45 ಮೀ.), ಜಾವೆಲಿನ್ ಥ್ರೋ: ಕೆ. ರಷ್ಮಿ (ಆಳ್ವಾಸ್; ದೂರ: 40.40 ಮೀ.), 4ಷ400 ಮೀ. ರಿಲೇ: ಡಿವೈಎಸ್‌ಎಸ್, ಮೈಸೂರು (ಕಾಲ: 3:54.6 ಸೆ., ಕೂಟ ದಾಖಲೆ)18 ವರ್ಷ: 800 ಮೀ. ಓಟ: ಯು. ಪ್ರಿಯಾಂಕಾ (ಡಿವೈಎಸ್‌ಎಸ್, ಮೈಸೂರು; ಕಾಲ: 2:33.5 ಸೆ.), 3000 ಮೀ. ಓಟ: ಕೆ. ಅನುಷಾ (ಆಳ್ವಾಸ್; ಕಾಲ: 11:33.9 ಸೆ.), ಜಾವೆಲಿನ್ ಥ್ರೋ: ಕೆ. ದೀಕ್ಷಾ (ಆಳ್ವಾಸ್; ದೂರ: 32.22 ಮೀ.), ಹೈಜಂಪ್: ಸೃಷ್ಟಿ ಸುನಿಲ್ (ಇಂಡೋ ಜರ್ಮನ್ ಕ್ಲಬ್; ಎತ್ತರ: 1.60 ಮೀ.), ಡಿಸ್ಕಸ್ ಥ್ರೋ: ಜೆ.ಎಸ್. ಪ್ರಿಯಾಂಕಾ (ದಕ್ಷಿಣ ಕನ್ನಡ; ದೂರ: 36.17 ಮೀ.), ಮೆಡ್ಲೆ ರಿಲೇ: ಎಸ್‌ಎಐ, ಮಡಿಕೇರಿ (ಕಾಲ: 2:28.4 ಸೆ.)16 ವರ್ಷ: 1000 ಮೀ. ಓಟ: ಸಿ. ಪೂರ್ಣಿಮಾ (ಡಿವೈಎಸ್‌ಎಸ್- ಮೈಸೂರು, ಕಾಲ: 3:13.5 ಸೆ.), ಜಾವೆಲಿನ್ ಥ್ರೋ: ಜಿ.ಕೆ. ನಮಿತಾ (ಆಳ್ವಾಸ್, ದೂರ: 32.84 ಮೀ.), ಡಿಸ್ಕಸ್ ಥ್ರೋ: ಪಿ. ನಿವೇದಿತಾ (ಉತ್ತರ ಕನ್ನಡ, ದೂರ: 33.22 ಮೀ.), ಮೆಡ್ಲೆ ರಿಲೇ: ದಕ್ಷಿಣ ಕನ್ನಡ (ಕಾಲ: 2:26.5 ಸೆ.)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.