ಶುಕ್ರವಾರ, ಮೇ 14, 2021
27 °C

ಶತಾಯುಶಿ ಬಸವಣ್ಣೆಪ್ಪ ನಿರ್ವಾಣೆಪ್ಪ ಭೂಶಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿ: ಸ್ವಾತಂತ್ರ್ಯ ಹೋರಾಟಗಾರ, ಘೋಡಗೇರಿಯ ಶತಾಯುಶಿ ಬಸವಣ್ಣೆಪ್ಪ ನಿರ್ವಾಣೆಪ್ಪ ಭೂಶಿ (103) ಅವರು ಭಾನುವಾರ ತಮ್ಮ ಮನೆಯಲ್ಲಿ ನಿಧನ ಹೊಂದಿದರು.ಕಟ್ಟಾ ಗಾಂಧಿವಾದಿಯಾಗಿದ್ದ ಅವರು 20ನೇ ವಯಸ್ಸಿನಲ್ಲಿ 1930ರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.  ಆನಂತರ 1932ರ ಮದ್ಯಪಾನ ವಿರೋಧಿ ಆಂದೋಲನ, 1934ರ ಕರ ನಿರಾಕರಣೆ, 1942 ರ ಚಲೇಜಾವ್ ಚಳುವಳಿಗಳಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ್ದರು. ಸ್ವಾತಂತ್ರ್ಯಾ ನಂತರ ರಾಜಕೀಯ ಪ್ರವೇಶಿಸದೆ ಗ್ರಾಮಾಭಿವೃದ್ಧಿಯಲ್ಲಿ ತೊಡಗಿದ್ದರು.ಭೂಶಿ ಅವರ ದೇಶ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ `ತಾಮ್ರಪತ್ರ' ನೀಡಿ ಗೌರವಿಸಿತ್ತು.

ಅಂತ್ಯಕ್ರಿಯೆ ಸ್ವಗ್ರಾಮ ಘೋಡಗೇರಿಯಲ್ಲಿ ಭಾನುವಾರ ನಡೆಯಿತು. ತಹಶೀಲ್ದಾರ್ ಶೇಖ್ ಕಲುಮುಲ್ಲಾ ಪಾಲ್ಗೊಂಡು ತಾಲ್ಲೂಕು ಆಡಳಿತದ ಪರವಾಗಿ ಅಂತಿಮ ನಮನ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.