ತಿರುವನಂತಪುರ (ಪಿಟಿಐ): ಕಳೆದ ವಾರ 102 ಯಾತ್ರಾರ್ಥಿಗಳ ಸಾವಿಗೆ ಕಾರಣವಾದ ಕಾಲ್ತುಳಿತದಂಥ ಘಟನೆಗಳು ಮತ್ತೆ ಮರುಕಳಿಸದಂತೆ ಮುಂಜಾಗ್ರತೆಯ ಸೂಕ್ತ ಕ್ರಮ ಕೈಗೊಳ್ಳಲು ಅನುವಾಗುವಂತೆ ಉಪಗ್ರಹಗಳಿಂದ ತೆಗೆದ ಶಬರಿಮಲೆ ಪ್ರದೇಶದ ಚಿತ್ರಗಳನ್ನು ಕೇರಳ ಸರ್ಕಾರಕ್ಕೆ ಒದಗಿಸಲು ಇಸ್ರೊ ಸಂಸ್ಥೆ ಮುಂದಾಗಿದೆ.

ಇಸ್ರೊ ಒದಗಿಸುವ ಶಬರಿಮಲೆ ಪ್ರದೇಶದ ಉಪಗ್ರಹಗಳಿಂದ ತೆಗೆದ ಮೂರು ಆಯಾಮದ ಚಿತ್ರಗಳು ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿಗಳು, ಯಾತ್ರಾರ್ಥಿಗಳಿಗಾಗಿ ಶಬರಿಮಲೆಯಲ್ಲಿ ಸರಿಯಾದ ರೀತಿಯಲ್ಲಿ ರಸ್ತೆ ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಹಾಯಕವಾಗುತ್ತವೆ. ಅದರಿಂದ ಮುಂದೆ ಕಳೆದ ವಾರದಲ್ಲಿ ನಡೆದಂಥ ದುರ್ಘಟನೆಗಳನ್ನು ತಪ್ಪಿಸಬಹುದೆಂದು ಇಸ್ರೊ ಅಧ್ಯಕ್ಷ ಡಾ. ರಾಧಾಕೃಷ್ಣನ್ ಅವರು ಹೇಳಿದ್ದಾರೆ.

ಬೆಳಕಿನರಿಮೆ ವಿದ್ಯುನ್ಮಾನ ವಿಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿಗಳ ಕುರಿತು ಇಲ್ಲಿ ಏರ್ಪಡಿಸಿದ್ದ ಅಂತರ್ ರ್ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಂಬಲದಿಂದ ಇಸ್ರೊ, ಉಪಗ್ರಹ ಚಿತ್ರಗಳನ್ನು ಬಳಸಿ ಈಗಾಗಲೇ ದೇಶದ ಸುಮಾರು 200 ಜಿಲ್ಲೆಗಳ ಪ್ರಾಕೃತಿಕ ಹೊರಮೈ ಮಾಹಿತಿ ಸಿದ್ಧಪಡಿಸಿದೆ~ ಎಂದೂ ಇಸ್ರೊ ಅಧ್ಯಕ್ಷ ಡಾ. ರಾಧಾಕೃಷ್ಣನ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.