ಕೃಷ್ಣರಾಜಪುರ: ಇಂದಿನ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಜೋತು ಬೀಳುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಶಾಸಕ ಎನ್.ಎಸ್. ನಂದೀಶರೆಡ್ಡಿ, ಯುವ ಪೀಳಿಗೆ ಬಸವಾದಿ ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.

ಬಸವ ಸೇವಾ ಸಮಿತಿಯು ಬಸವನಗರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಮತ್ತು ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಮಾದೇವಿ ಸ್ತ್ರೀ ಸಮಾಜ ಟ್ರಸ್ಟ್ನ ಅಧ್ಯಕ್ಷೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಕೆ.ಬಿ. ಸರ್ವಮಂಗಳಾಶಾಸ್ತ್ರಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ವಿಭೂತಿಪುರ ಮಠದ ಪೀಠಾಧ್ಯಕ್ಷ ಡಾ. ಮಹಾಂತಲಿಂಗ ಸ್ವಾಮೀಜಿ, `ಶರಣರು ಸಮಾಜವನ್ನು ಸರಿದಾರಿಗೆ ತರಲು ತಾವೇ ಮಾದರಿಯಾಗಿ ನಡೆದು ತೋರಿಸಿದರು~ ಎಂದರು.

ಸನ್ಮಾನ ಸ್ವೀಕರಿಸಿ ಕೆ.ಬಿ. ಸರ್ವಮಂಗಳಾಶಾಸ್ತ್ರಿ ಮಾತನಾಡಿದರು. ರಕ್ತದಾನ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಿಜೆಪಿ ಮುಖಂಡರಾದ ದೇವರಾಜು, ನರೇಂದ್ರ ಪುಟ್ಟು, ಸಮಿತಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಆಂಜಿ, ಸಾಮಾಜಿಕ ಕಾರ್ಯಕರ್ತ ಕೆ.ಜಿ.ಶಿವರುದ್ರಯ್ಯ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು. ಅಧ್ಯಕ್ಷ ಆಡಿ ಪಾಟೀಲ್ ಸ್ವಾಗತಿಸಿದರು. ಹೊಸಮನೆ ನಿರೂಪಿಸಿದರು. ಗಾಯಕ ನಟರಾಜ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.