ಶುಕ್ರವಾರ, ಮೇ 27, 2022
22 °C

ಶರಣರ ವಿಚಾರ ಅನುಷ್ಠಾನಕ್ಕೆ ನೂರೆಂಟು ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಶರಣರ ವಿಚಾರ ಅನುಷ್ಠಾನಕ್ಕೆ ಮುಂದಾದಾಗ ಅಡ್ಡಿಪಡಿಸುವವರೂ ಇದ್ದೇ ಇರುತ್ತಾರೆ. ಆದರೆ, ಶರಣರ ತತ್ವ ಪರಿಪಾಲನೆ, ಶರಣರ ಚಿಂತನೆಯಲ್ಲಿ ಸಾಗುವುದನ್ನು ಬಿಡಬಾರದು. ಶರಣರ ಚಿಂತನೆಯ ಬಗ್ಗೆ ಆಲೋಚನೆ ಮಾಡುವ ಒಳನೋಟವೂ ಬೇಕು ಎಂದು ಚಿತ್ರದುರ್ಗ ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಬಸವ ಕೇಂದ್ರ, ವೀರಶೈವ ಸಮಾಜ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಲಿಂಗವಂತ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ತಪ್ಪುಗಳು ಸಾಮಾನ್ಯ. ತಪ್ಪು ಮಾಡದೇ ಇರುವವರೇ ಇಲ್ಲ. ಆ ತಪ್ಪುಗಳೇ ಜೀವನದ ಪಾಠ ಹೇಳುತ್ತವೆ. ಅದನ್ನು ತಿದ್ದಿಕೊಂಡು ನಡೆಯಬೇಕು. ಬೇರೆಯವರ ತಪ್ಪುಗಳನ್ನು ನೋಡಿ ಪಾಠ ಕಲಿಯಬೇಕು. ತಾಪಕ್ಕೆ ಕೋಪ ಸೇರಿಬಿಟ್ಟರೆ ಪಾಪ ಎಂಬ ಮಗುವಿನ ಜನನವಾಗುತ್ತದೆ. ಈ ಪಾಪ ಕಳೆದುಕೊಳ್ಳಲು ಇರುವ ಮಾರ್ಗವೆಂದರೆ ಪಶ್ಚಾತಾಪ, ಪ್ರಾಯಶ್ಚಿತ ಮಾತ್ರ ಎಂದು ನುಡಿದರು.12ನೇ ಶತಮಾನದ ಕ್ರಾಂತಿಯ ನಂತರ ಬಸವಾದಿ ಶರಣರ ಅನುಯಾಯಿಗಳು ಬಹುದೇವತಾ ಆರಾಧನೆಗೆ ಒಳಗಾದರೇಕೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದಹುನ್ನೂರಿನ ಬಸವಜ್ಞಾನ ಗುರುಕುಲದ ಈಶ್ವರ ಮಂಟೂರ ಅವರು, ಬಸವ ತತ್ವ ಈ ಜಗದ ತತ್ವ. ಭಿನ್ನಾಭಿಪ್ರಾಯ ಮರೆತು ಶರಣರ ವಚನ ಪರಿಪಾಲನೆ ಮಾಡಬೇಕು. ಪ್ರೇಮ ಇದ್ದಲ್ಲಿ ಕೋಮು ಇಲ್ಲ ಎಂದು ಸರಳ ತತ್ವ ಸಾರ ಅರಿಯಬೇಕು ಎಂದು ತಿಳಿಸಿದರು.ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ವಿ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಬಿ ಬಸವರಾಜಪ್ಪ ಅವರು ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.