ಗುರುವಾರ , ಏಪ್ರಿಲ್ 15, 2021
23 °C

ಶವಸಂಸ್ಕಾರಕ್ಕೆ ಬಂದು ತಾನೇ ಶವವಾದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುತ್ತಲ: ಪಟ್ಟಣದ ನಿವಾಸಿಯಾದ ಮಲ್ಲಪ್ಪ ಕರಿಯಲ್ಲಪ್ಪ ತಂಬೂರಿ (50) ಸಂಬಂಧಿಯ ಶವಸಂಸ್ಕಾರಕ್ಕೆ ಬಂದ ಸಂದರ್ಭದಲ್ಲಿ ತಾವೇ ಶವವಾದ ಘಟನೆ  ಜರುಗಿದೆ. ಶವಸಂಸ್ಕಾರದ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿ ಪಕ್ಕದ ದೊಡ್ಡಹೊಂಡದಲ್ಲಿ ಮುಖ ತೊಳೆಯಲಿಕ್ಕೆ ಹೋದಾಗ ಕಾಲು ಜಾರಿಬಿದ್ದು ಅವರು ಸಾವನ್ನಪ್ಪಿದ್ದಾರೆ.ಘಟನೆ ಬುಧವಾರ ಸಂಜೆ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯ ಪೋಲಿಸರು ಹಾವನೂರು ಗ್ರಾಮದಿಂದ ಮೀನುಗಾರರನ್ನು ಕರೆಯಿಸಿ ಸುಮಾರು ಎರಡು ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಮೃತದೇಹವನ್ನು ಪತ್ತೆ ಹಚ್ಚಿದರು.  ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರಕ್ಕೆ ತರಲಾಯಿತು. 

 ಅವರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಸಂಬಂಧಿಕರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಕುರಿತು ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.