ಬುಧವಾರ, ಜೂನ್ 16, 2021
23 °C

ಶಸ್ತ್ರಾಸ್ತ್ರ ಖರೀದಿ: ಭಾರತ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ನವದೆಹಲಿ (ಪಿಟಿಐ): ಚೀನಾ ಮತ್ತು ಪಾಕಿಸ್ತಾನಕ್ಕಿಂತಲೂ ಮೂರು ಪಟ್ಟು ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿ­ಕೊಳ್ಳುವ ಭಾರತ ವಿಶ್ವದಲ್ಲಿ ಅತಿ ದೊಡ್ಡ ಶಸ್ತ್ರ ಖರೀದಿ ರಾಷ್ಟ್ರವಾಗಿದೆ ಎಂದು ಸ್ವೀಡನ್‌ ಸಂಶೋಧನಾ ಸಂಸ್ಥೆಯು ಅಭಿಪ್ರಾಯಪಟ್ಟಿದೆ.

 

ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್‌ ಪೀಸ್‌ ರೀಸರ್ಚ್‌ ಸಂಸ್ಥೆ­ಯು ಸಂಗ್ರಹಿಸಿ­ರುವ  ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಸಾಗಾ­ಟ ಅಂಕಿಸಂಖ್ಯೆಗಳ ಪ್ರಕಾರ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಚೀನಾ ಮತ್ತು ಪಾಕಿ­ಸ್ತಾನ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇವೆ. 2008ರಿಂದ 2013ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಖರೀದಿಯ ಪ್ರಮಾಣವು ಶೇಕಡಾ 111ರಷ್ಟು ಏರಿಕೆಯಾಗಿದೆ.

 

ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವಲ್ಲಿ ರಷ್ಯಾ ಮೊದಲ ಸ್ಥಾನ­ದಲ್ಲಿ ಇದೆ. ಶೇಕಡಾ 75ರಷ್ಟು ರಷ್ಯಾ­ದಿಂದ ಮತ್ತು ಶೇಕಡಾ 7ರಷ್ಟು ಅಮೆರಿಕ­ದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಏಷ್ಯಾ ರಾಷ್ಟ್ರ­ಗಳಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವ ಉದ್ದೇಶ­ದಿಂದ ಅಮೆರಿಕ ಮತ್ತು ಚೀನಾ ಮಧ್ಯೆ ಶಸ್ತ್ರಾಸ್ತ್ರ ಮಾರಾಟಕ್ಕೆ ಪೈಪೋಟಿ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.