ಹಾವೇರಿ: ನಗರದಲ್ಲಿ ಮಾ. 21 ರಂದು ನಡೆಯಲಿರುವ ಹೋಳಿಹಬ್ಬವನ್ನು ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಶಾಂತಿ ಸೌಹಾರ್ದತೆಯಿಂದ ಆಚರಿಸಲು ನಿರ್ಧರಿಸಲಾಯಿತು.

ನಗರದ ಪೊಲೀಸ್ ಟೆನ್ನಿಸ್ ಕೋರ್ಟ್ನಲ್ಲಿ ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಅಗಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಈ ನಿರ್ಧರ ಪ್ರಕಟಿಸಲಾಯಿತಲ್ಲದೇ, ಹೋಳಿ ಹಬ್ಬದ ಸಂದರ್ಭದಲ್ಲಿ ಅಹಿತರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಆಯಾ ಸಮುದಾಯದ ಮುಖಂಡರಿಗೆ ಮನವಿ ಮಾಡಲಾಯಿತು.

ಹೋಳಿಹಬ್ಬದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಸಹೋದರತೆಯಿಂದ ಹಬ್ಬವನ್ನು ಆಚರಿಸಿ ಪರಸ್ಪರ ಸಂತೋಷ ಪಡುವ ಭರವಸೆಯನ್ನು ಸಭೆಯಲ್ಲಿ ಭಾಗವಹಿಸಿದ ವಿವಿಧ ಸಮುದಾಯದ ಮುಖಂಡರು ಭರವಸೆ ನೀಡಿದರು.

21 ರಂದು ಕಾಮದಹನ ನಗರದಲ್ಲಿ ಮಾ.16ರಂದು ರತಿಕಾಮನ ಪ್ರತಿಷ್ಠಾಪನೆ ಮಾಡಲಾಗುವುದು. ಮಾ.21ರಂದು ಕಾಮದಹನ ನಡೆಯಲಿದ್ದು, ಅಂದೇ ಬಣ್ಣದಾಟ ಓಕುಳಿ ನಡೆಯಲಿದೆ. ಪ್ರತಿ ವರ್ಷ ಕಾಮನನ್ನು ಪ್ರತಿಷ್ಠಾಪಿಸಿದ ನಾಲ್ಕನೇ ದಿನಕ್ಕೆ ಕಾಮದಹನ ಹಾಗೂ ಓಕಳಿ ನಡೆಯಬೇಕಿತ್ತು. ಆದರೆ, ಶನಿವಾರ ಹಾಗೂ ಭಾನುವಾರ ಓಕುಳಿ ಆಡುವುದಿಲ್ಲವಾದ್ದರಿಂದ ಈ ವರ್ಷ ಕಾಮದಹನ ಹಾಗೂ ಓಕಳಿಯನ್ನು ಸೋಮವಾರ ಆಡಲಾಗುತ್ತದೆ ಎಂದು ಮುಖಂಡರು ಸಭೆಗೆ ತಿಳಿಸಿದರು.

ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ ಮಾತನಾಡಿ, ಹೋಳಿ ಹಬ್ಬ ಶಾಂತಿ ಸಂಕೇತದ ಹಬ್ಬ. ಅದನ್ನು ಪ್ರತಿಯೊಬ್ಬರು ಶಾಂತಿ ಸೌಹಾರ್ದತೆಯಿಂದ ಆಚರಿಸುವುದಕ್ಕೆ ಗಮನ ನೀಡಬೇಕೆಂದರು. ಕೆಲ ಕಿಡಿಗೇಡಿಗಳು ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದ್ದಾಗಿಸುವ ಹುನ್ನಾರದಲಿರ್ಲುತ್ತಾರೆ. ಅಂತಹ ಕಿಡಿಗೇಡಿಗಳ ಬಗ್ಗೆ ಎಚ್ಚದಿಂದ ಇರಬೇಕು ಎಂದು ಸಲಹೆ ಮಾಡಿದರು.

ನಗರಸಭೆ ವಿರೋಧ ಪಕ್ಷದ ನಾಯಕ ಬಾಬುಸಾಬ ಮೋಮಿನಗಾರ, ಸದಸ್ಯ ಹೊನ್ನಪ್ಪ ತಗಡಿನಮನಿ ಮತ್ತಿತರರು ಮಾತನಾಡಿ, ನಗರದಲ್ಲಿರುವ ಕಾಮ ಪ್ರತಿಷ್ಠಾಪನೆ ಸಮಿತಿಗಳ ಸದಸ್ಯರು ಹಾಗೂ ಮುಖಂಡರು ತಮ್ಮ ತಮ್ಮ ಪ್ರದೇಶಗಳಲ್ಲಿನ ಯುವಕರಿಗೆ ಶಾಂತಿಯಿಂದ ಹೋಳಿ ಆಚರಣೆ ಮಾಡುವಂತೆ ತಿಳಿವಳಿಕೆ ಹೇಳಬೇಕು. ತಾವು ಕೂಡಾ ಓಕಳಿ ಪೂರ್ಣಗೊಳ್ಳುವವರೆಗೆ ಮೆರವಣಿಗೆಯಲ್ಲಿರಬೇಕು ಎಂದು ತಿಳಿಸಿದರು.

ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ ಮಾತನಾಡಿ, ಹಬ್ಬದ ದಿನಗಳಲ್ಲಿ ನಗರಸಭೆಯಿಂದ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಅವುಗಳನ್ನು ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಯಾವುದೇ ಬಗೆಯ ಸಮಸ್ಯೆಗಳು ಬರದಂತೆ ನಗರಸಭೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

10ರ ನಂತರ ಅವಕಾಶವಿಲ್ಲ: ಹೋಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 10ರ ನಂತರ ಹಲಗೆ ಬಾರಿಸುವುದಕ್ಕೆ ಅವಕಾಶ ನೀಡಬಾರದೆಂದು ಕೆಲವರು ಒತ್ತಾಯಿಸಿದರೆ, ಕೆಲವರು ರಾತ್ರಿ 10ರ ನಂತರ ಕೂಡಾ ಹಲಗೆ ಬಾರಿಸುವುದಕ್ಕೆ ಅವಕಾಶ ನೀಡಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಮಾ.17ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾಗುವುದರಿಂದ ಯಾವುದೇ ಕಾರಣಕ್ಕೂ ರಾತ್ರಿ 10ರ ನಂತರ ಹಲಗೆ ಬಾರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.