ಹುಬ್ಬಳ್ಳಿ: ಅವರ ದೇಹದಲ್ಲಾಗಲಿ, ಮುಖ ದಲ್ಲಾಗಲಿ 68 ವರ್ಷ ಜೀವನ ರಥ ಹೊತ್ತೊಯ್ದ ಬಳಲಿಕೆ ಕಾಣುತ್ತಿರಲಿಲ್ಲ. ಜೀವನ ಸಂಜೆಯತ್ತ ಕಾಲಿಡುತ್ತಿದ್ದರೂ ಮನಸ್ಸಿನಲ್ಲಿರುವ ಮಗುವಿನ ಮುಗ್ದಭಾವದ ಹೂನಗೆಯ ಸೊಬಗಿಗೆ ಭಂಗವಿರಲಿಲ್ಲ. ಶ್ರುತಿ ಹಿಡಿದು ‘ಆಜ್ ಸಖಿ ಸತ್ಗುತು ಘರ್ ಆಯೇ’ ಎಂದು ಹಾಡಿದ ಭಜನ್ದಲ್ಲಿ ಸಾಧನೆಯ ಪ್ರಭಾವವಿತ್ತು. ಪ್ರಿಯ ಶಿಷ್ಯಂದಿರು, ಅಭಿಮಾನಿಗಳ ಪ್ರೀತಿಯ ಕಾಣಿಕೆಗೆ ಸಲ್ಲಿಸುವ ಕೃತಜ್ಞತೆಯ ‘ಧ್ವನಿ’ ಇತ್ತು.

ನಾಡಿನ ಹಿರಿಯ ಗಾಯಕ, ಪಂ. ನಾಗನಾಥ ಒಡೆಯರ ಅವರ ಜನ್ಮದಿನದ ಅಂಗವಾಗಿ ವಿಕಾಸನಗರದ ಅವರ ನಿವಾಸದಲ್ಲಿ ಭಾನುವಾರ ಏರ್ಪಡಿಸಿದ್ದ ಸರಳ, ಸುಂದರ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು, ಶಿಷ್ಯಂದಿರಿಂದ ಸ್ವರಾಭಿನಂದನೆ ನಡೆಯಿತು.ಹಿರಿ-ಕಿರಿಯ ಶಿಷ್ಯಂದಿರು ಗಾಯನದ ಮೂಲಕ ನೀಡಿದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಮನಸಾರೆ ಆಸ್ವಾದಿಸಿದ ಒಡೆಯರ, ಜನ್ಮದಿನದ ಭೋಜನದ ನಂತರ ಶಿಷ್ಯಂದಿರಿಗೆ ಸ್ವರರಸಧಾರೆಯ ಕಾಣಿಕೆಯನ್ನು ನೀಡಿ ಮುದಗೊಳಿಸಿದರು.

ನಾಟ್ ಸಂಗೀತ್, ಅಭಂಗ್ ನಂತರ ರಾಗ ಭೈರವಿ ಮೂಲಕ ಜನ್ಮದಿನದ ವಿಶೇಷ ಕಾರ್ಯಕ್ರಮವನ್ನು ನೀಡಿದ ಅವರು ಹಾಡಿದ ಅವಧಿ ಕಡಿಮೆಯಾದರೂ ಪ್ರತಿನಿತ್ಯ ಅವರಿಂದ ಸಂಗೀತ ಕಲಿಯುವ ಹಾಗೂ ಅವರ ಕಛೇರಿ ಇದ್ದಾಗಲೆಲ್ಲ ಹಾಜರಾಗುವ ಅಭಿಮಾನಿಗಳು ಅನುಭವಿಸಿದ ಆನಂದ ಅಪಾರ.ನುಡಿ ಹಾಗೂ ‘ಸ್ವರ’ದ ಮೂಲಕ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಹಾರ, ಉಡು ಗೊರೆಗಳ ಸಂಗಮವೂ ಇತ್ತು. ಅದೆಲ್ಲದರಲ್ಲೂ ಅಭಿಮಾನ, ಪ್ರೀತಿಯ ಛಾಯೆಯೂ ಅಚ್ಚಾಗಿತ್ತು. ಹೀಗಾಗಿ ಹಸನ್ಮುಖಿ ಒಡೆಯರ ಅವರ ನಗುವಿಗೆ ಭಾನುವಾರ ವಿಶೇಷ ಕಳೆ ಇತ್ತು.

ಬಾಬುರಾವ್ ಹಾನಗಲ್, ಸುಭಾಷ ಮಡಿಮನ್, ಮನೋಜ ಹಾನಗಲ್, ಡಾ. ಜಯಲಕ್ಷ್ಮಿ ಕಾಮತ್, ಮಾಧವ ವರದ್, ಕಾಶೀನಾಥ ದೀಕ್ಷಿತ್ ಮತ್ತಿತರರ ಶುಭನುಡಿಗಳ ನಂತರ ಸ್ವರಧಾರೆ ಹರಿಸಿದ ಮೊದಲ ಶಿಷ್ಯೆ ಬಾಲಕಿ ಫಾಲ್ಗುಣಿ ಲಕ್ಷ್ಮೇಶ್ವರ ಪುರಾಣಿಕ್. ಕಾಪಿ ರಾಗದಲ್ಲಿ ಮೂಡಿಬಂದ ‘ದಯೆಮಾಡೋ ರಂಗ’ ಎಂಬ ಪುರಂದರದಾಸರ ಪದಕ್ಕೆ ಸ್ವತಃ ನಾಗನಾಥ ಒಡೆಯರ ಹಾರ್ಮೋನಿಯಂ ಸಾಥ್ ನೀಡಿದರೆ ಅವರ ಪುತ್ರ ಸಂತೋಷ ಒಡೆಯರ ತಬಲಾದಲ್ಲಿ ಸಹಕರಿಸಿದರು.

ಇವರ ಗಾಯನದ ನಂತರ ಗುರುನಮನ ಸಲ್ಲಿಸಿದ್ದು ಶ್ರೀ ಶಾರದಾ ಸಂಗೀತ ವಿದ್ಯಾಲಯದ ವಾಸುದೇವ ಕಾರೇಕರ್. ಮಾಲ್ಕೌಂಸ್ ರಾಗದಲ್ಲಿ ಅವರು ಪ್ರಸ್ತುತಪಡಿಸಿದ ಅನುರಣಿಯ ತೋಕಡಾ ಎಂಬ ಮರಾಠಿ ಭಜನ್ ಹಾಗೂ ನಟ್ ಭೈರವ್ ರಾಗದ ‘ನಾರಾಯಣ ರಮಾ ರಮಣ’ ಎಂಬ ನಾಟ್ ಸಂಗೀತ್ ‘ಗುರು ಮನೆ’ಯನ್ನು ಪುಳಕಗೊಳಿಸಿತು.

ವೀಣಾ ಹಾನಗಲ್, ಡಾ. ಸುಲಭಾ ದತ್ತ, ಪಂ. ಅಶೋಕ ನಾಡಗೀರ್ ಹೀಗೆ ದಿನವಿಡೀ ಗುರುವಿಗೆ ರಾಗಗಳ ರಸಪಾಕ ಉಣಬಡಿಸಿ ಗುರುನಮನವನ್ನು ಅರ್ಥಪೂರ್ಣಗೊಳಿಸಿದರು.ಎಚ್.ಆರ್. ಪಾಟೀಲ, ಶಿವಣ್ಣ ಸಂಶೀಕರ್ ಮತ್ತು ಬಿ.ಜಿ. ಬಡಿಗೇರ (ಹಾರ್ಮೋನಿಯಂ), ಪವನ್ ನೀತಿ (ವಯಲಿನ್) ತಾಪಸ್ಕರ್, ಭಜಂತ್ರಿ ಹಾಗೂ ಸುಹಾಸ್ (ತಂಬೂರಿ) ವಾದ್ಯ ಸಹಕಾರ ನೀಡಿದರು. ಜನ್ಮದಿನದ ಹಾರೈಕೆಗಳನ್ನು ವಿನಯಾ ತಿವಿನಯದಿಂದ ಸ್ವೀಕರಿಸಿದ ಒಡೆಯರ್ ಮಾತನಾಡಿ, ‘ಸಂಗೀತವೆಂಬುದು ಅಲೌಕಿಕ ವಿದ್ಯೆ. ಅದನ್ನು ಕರಗತ ಮಾಡಿಕೊಳ್ಳಬೇಕಾದರೆ ಪೂರ್ವಜನ್ಮ ಸುಕೃತವಿರಬೇಕು. ಹಿರಿಯರ ಆಶೀರ್ವಾದವಿರಬೇಕು. ಗುರುಬಲದೊಂದಿಗೆ ಶ್ರಮವೂ ಇರಬೇಕು’ ಎಂದು ಹೇಳಿದರು.

‘ಸಂಗೀತಪ್ರಿಯ ತಂದೆಯ ಮಗನಾಗಿ ಜನಿಸಿದ ತಮಗೆ ಗಂಗೂಬಾಯಿ ಹಾನಗಲ್ ಅವರು ಗುರುವಾಗಿ ಲಭಿಸಿದ್ದು ಪುಣ್ಯ ಎಂದ ಅವರು, ಗಂಗೂಬಾಯಿ ಅವರ ಬಳಿ ಹೆಚ್ಚು ಕಾಲ ಸಂಗೀತ ಕಲಿತ ಶಿಷ್ಯ ಎಂಬ ಗೌರವ ತಮಗೆ ಸಂದಿದೆ’ ಎಂದು ಭಾವುಕರಾಗಿ ನುಡಿದರು.ವೇದಿಕೆಗಳಲ್ಲಿ ಕಾರ್ಯಕ್ರಮಗಳು ಸಿಗಲಿ, ಬಿಡಲಿ, ನನ್ನಷ್ಟಕ್ಕೆ ನಾನು ಹಾಡುವುದನ್ನು ಬಿಡುವುದಿಲ್ಲ. ಶಿಷ್ಯಂದಿರಿಗೆ ಸಂಗೀತ ಪಾಠ ಮಾಡುವುದನ್ನೂ ಬಿಡುವುದಿಲ್ಲ ಎಂಬುದು ಅವರ ಅಭಿಮಾನದ ನುಡಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.