ಬುಧವಾರ, ಜೂನ್ 23, 2021
21 °C

ಶಾಲಾ ಕಟ್ಟಡದ ಸಿಮೆಂಟ್ ಛಾವಣಿ ಕುಸಿತ: ಶಿಕ್ಷಕ-ವಿದ್ಯಾರ್ಥಿನಿಯರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಪರೀಕ್ಷೆ ನಡೆಯುತ್ತಿದ್ದ ವೇಳೆ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ಶಿಕ್ಷಕರಿಗೆ ಗಾಯವಾಗಿರುವ ಘಟನೆ ವಿಶ್ವನಾಥಪುರ ಪೋಲೀಸ್ ಠಾಣೆ ವ್ಯಾಪ್ತಿಯ ಬಿದಲೂರು ಗ್ರಾಮದಲ್ಲಿ ನಡೆದಿದೆ.8 ನೇ ತರಗತಿ ವಿದ್ಯಾರ್ಥಿನಿಯರಾದ ಲಾವಣ್ಯ ಹಾಗೂ ಹೇಮಾ ಮತ್ತು ಶಿಕ್ಷಕ ಮಹದೇವ್ ಅವರು ಗಾಯಗೊಂಡವರಾಗಿದ್ದಾರೆ.ಇವರನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಲಾಗಿದೆ.ಗಾಯಗೊಂಡ ಶಿಕ್ಷಕ ಮಾತನಾಡಿ, `ಘಟನೆ ನಡೆದಾಗ ತಕ್ಷಣವೇ ಏನಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬರಲೇ ಇಲ್ಲ.  ಒಮ್ಮೆಲೇ ಬಂಡೆ ಅಪ್ಪಳಿಸಿದಂತಾಯಿತು~ ಎಂದರು.`ಎಂಟನೆ ತರಗತಿಯ ಒಟ್ಟು 51 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಿರತರಾಗಿದ್ದರು. ಒಂದು ವೇಳೆ ಈ ಘಟನೆ ಏನಾದರೂ 1-30 ರ ಮಧ್ಯಾಹ್ನ ಊಟದ ಸಮಯದಲ್ಲಿ ನಡೆದಿದ್ದರೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗುತ್ತಿದ್ದವು~ ಎಂದು ವಿವರಿಸಿದರು.  ಕಳಪೆ ಕಾಮಗಾರಿ ಕಾರಣ: `ನಾಲ್ಕು ಕೊಠಡಿಗಳನ್ನು ಹೊಂದಿರುವ ಈ ಶಾಲಾ ಕಟ್ಟಡ ಶೇಕಡ 90 ರಷ್ಟು ಕಳಪೆಯಾಗಿರುವುದು ಈ ಅವಘಡದಿಂದ ದೃಢಪಟ್ಟಿದೆ. ಇದನ್ನು ಅವಸರದಲ್ಲಿ ಪೂರ್ಣಗೊಳಿಸಿದ ಪರಿಣಾಮ ಹೀಗಾಗಿದೆ~ ಎಂದು ಗ್ರಾಮಸ್ಥ ನಾರಾಯಣ ಸ್ವಾಮಿ, ನಾಗರಾಜ್ ಹಾಗೂ ಲಕ್ಷ್ಮಣ್ ನೇರವಾಗಿ ಆರೋಪಿಸಿದರು.ಜಿಲ್ಲಾ ಪಂಚಾಯಿತಿ ಆರ್‌ಐಡಿಎಫ್‌ನ 13 ನೇ ಹಣಕಾಸು ಯೋಜನೆಯಡಿ ಅಂದಾಜು 24 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡವನ್ನು ಜನವರಿ 24 ರಂದಷ್ಟೇ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು.

 

ಶೇ. 10 ರಷ್ಟು ಕಾಮಗಾರಿಯೂ ಪೂರ್ಣಗೊಂಡಿರದ ವೇಳೆಯಲ್ಲೇ ಇದನ್ನು ಅವರಸರದಲ್ಲಿ ಪೂರ್ಣಗೊಳಿಸಲಾಗಿತ್ತು~ ಎಂದು ಅವರು ಹೇಳಿದರು.ಮುಖ್ಯ ಶಿಕ್ಷಕ ಚಂದ್ರಪ್ಪ ಪ್ರತಿಕ್ರಿಯಿಸಿ, `ಫೆಬ್ರುವರಿ 22 ರಂದು ತರಗತಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಇಡೀ ಕಟ್ಟಡದ ಒಳ ಹಾಗೂ ಹೊರ ಆವರಣ ಸಂಪೂರ್ಣ ಬಿರುಕು ಬಿಟ್ಟಿದೆ. ಯಾವುದೇ ಸಮಯದಲ್ಲಾದರೂ ಬೀಳಬಹುದಾದ ಭೀತಿಯಿದೆ~ ಎಂದು ಆತಂಕ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.