ಗುರುವಾರ , ಮೇ 13, 2021
31 °C
ಪ್ರಜಾವಾಣಿ ಫಲಶ್ರುತಿ

ಶಾಲಾ ಕಟ್ಟಡ ಕಾಯಕಲ್ಪಕ್ಕೆ ಕ್ರಮ: ಬಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ತಾಲ್ಲೂಕಿನ ನಿಪ್ಪಾಣಿ ವಲಯ ವ್ಯಾಪ್ತಿಯಲ್ಲಿ ಬರುವ ಬೋರಗಾಂವ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ಒಂದು ಕೊಠಡಿಯನ್ನು ಒದಗಿಸಲಾಗಿದ್ದು, ಶೀಘ್ರದಲ್ಲೇ ಇನ್ನೊಂದು ಕೊಠಡಿ ಒದಗಿಸಲಾಗುವುದು ಹಾಗೂ ಶಿಥಿಲಗೊಂಡಿರುವ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಿಳಿಸಿದ್ದಾರೆ.ಕಳೆದ ಮಂಗಳವಾರ (ಜೂ.11)ದ `ಪ್ರಜಾವಾಣಿ' ಸಂಚಿಕೆಯಲ್ಲಿ `ಕಾಯಕಲ್ಪಕ್ಕೆ ಕಾದಿದೆ ಶಾಲಾ ಕಟ್ಟಡ' ಶೀರ್ಷಿಕೆಯಡಿ ಪ್ರಕಟಗೊಂಡ ವರದಿಗೆ ಸ್ಪಂದಿಸಿ ಶನಿವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು `ಪ್ರಜಾವಾಣಿ'ಯೊಂದಿಗೆ ಮಾತನಾಡಿದರು.ಶಾಲೆಗೆ ಸದ್ಯ 17 ಕೊಠಡಿಗಳಿವೆ. ಆದರೆ, 5 ಕೊಠಡಿಗಳು ಮಾತ್ರ ತರಗತಿಗಳನ್ನು ನಡೆಸಲು ಬಳಸಲಾಗುತ್ತಿದೆ. ಉಳಿದ ಕೊಠಡಿಗಳು ಶಿಥಿಲಗೊಂಡಿವೆ. ಅದರಲ್ಲೂ ಎರಡು ಕೊಠಡಿಗಳನ್ನು ದುರಸ್ತಿ ಮಾಡಿಕೊಂಡು ಬಳಕೆ ಮಾಡಲಾಗುತ್ತಿದೆ.ಸುರಕ್ಷತೆ ದೃಷ್ಟಿಯಿಂದ ಮುಖ್ಯ ಕಟ್ಟಡ ಎರಡು ಕೊಠಡಿಗಳಲ್ಲೇ ಅಕ್ಷರದಾಸೋಹ ಸಾಮಗ್ರಿ ದಾಸ್ತಾನು ಮತ್ತು ಗಣಕಯಂತ್ರಗಳನ್ನು ಅಳವಡಿಸಲಾಗಿದೆ. ಹೀಗಾಗಿ ಶಾಲೆಗೆ ಕೊಠಡಿಗಳ ಅಭಾವ ಎದುರಾಗಿದ್ದು, ಸದ್ಯಕ್ಕೆ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ಒಂದು ಕೊಠಡಿಯನ್ನು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಒದಗಿಸಲಾಗಿದೆ. ಇನ್ನೂ 2 ಕೊಠಡಿಗಳ ಆಭಾವ ಎದುರಾಗಲಿದ್ದು, ಶೀಘ್ರದಲ್ಲೇ ಇನ್ನೊಂದು ಕೊಠಡಿಯನ್ನು ಒದಗಿಸಲು ಪ್ರಯತ್ನಿಸಲಾಗುವುದು' ಎಂದು ತಿಳಿಸಿದರು.ಹೊಸ ಕಟ್ಟಡಗಳ ಮಂಜೂರು ಪ್ರಕ್ರಿಯೆ ವಿಳಂಬವಾಗುವುದರಿಂದ ಇತರ ಅನುದಾನವನ್ನು ಬಳಸಿಕೊಂಡು ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸುವುದಾಗಿ ದಂಡಿನ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.