ಮಂಗಳವಾರ, ಜೂನ್ 15, 2021
27 °C

ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಮಠಗಳು ನಿಂತ ನೀರಾಗಬಾರದು. ಹರಿಯುವ ಗಂಗೋತ್ರಿ ಆಗಬೇಕು. ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಜಡೆ ಸಂಸ್ಥಾನಮಠದ ಡಾ.ಮಹಾಂತ ಸ್ವಾಮೀಜಿ ಕರೆ ನೀಡಿದರು.ಮಠದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಹಾಗೂ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಹಯೋಗದಲ್ಲಿ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ ಯೋಜನೆ ಪ್ರಸ್ತುತಿ ಕಾರ್ಯಾಗಾರದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಈಚೆಗೆ ಮಾತನಾಡಿದರು.ಕಾರ್ಯಕ್ರಮ ಸುಗಮಕಾರ ಸದಾನಂದಗೌಡ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಶಾಲಾ ಗ್ರಂಥಾಲಯ, ಶೈಕ್ಷಣಿಕ ಪ್ರವಾಸ, ಶಿಕ್ಷಕರ ಸಭೆ, ಸಂಪನ್ಮೂಲ ಸಂಗ್ರಹಣೆ ಮೊದಲಾದ ಉಪಕ್ರಮಗಳನ್ನು ಆಯೋಜಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಿದ್ಯಾರ್ಥಿಗಳು ಪುಸ್ತಕ ಜೋಳಿಗೆ ಕಾರ್ಯಕ್ರಮದಲ್ಲಿ ಸಹಸ್ರಾರು ಪುಸ್ತಕಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದಾರೆ. 24ಕ್ಕೂ ಹೆಚ್ಚು ಶಾಲೆಗಳಲ್ಲಿ ಶಿಕ್ಷಕರು ಸ್ವಯಂ ಪ್ರೇರಿತರಾಗಿ ಗ್ರಂಥಾಲಯ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.ಶಾಲಾ ಮುಖ್ಯಶಿಕ್ಷಕರನ್ನು ಶೈಕ್ಷಣಿಕ ನಾಯಕರನ್ನಾಗಿ ರೂಪಿಸುವುದು, ಆ ಮೂಲಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಕಾರ್ಯಕ್ರಮ ಉದ್ದೇಶ ಎಂದು ಪ್ರತಿಷ್ಠಾನದ ಸದಸ್ಯ ಸೈಯದ್‌ಅತಿಕ್ ತಿಳಿಸಿದರು.

ಬಿಆರ್‌ಒ ನಿರಂಜನಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ನಿರ್ವಹಣೆ ತಂಡದ ಮುಖ್ಯಸ್ಥ ರವಿ ಶ್ರೀಧರನ್, ತಂಡದ ಸದಸ್ಯರು, ಡಯಟ್ ಉಪನ್ಯಾಸಕ ನಾಗೇಂದ್ರಪ್ಪ, ಶಿಕ್ಷಣ ಸಂಯೋಜಕ ಸಿ.ಎಲ್. ಜಾಲಗಾರ್, ಸಿಆರ್‌ಪಿ ಕೆ. ರೇಣುಕಾ ಉಪಸ್ಥಿತರಿದ್ದರು.ಸಿಆರ್‌ಪಿ ಸೋಮಲಿಂಗಪ್ಪ, ಪರಮೇಶ್ವರಪ್ಪ, ರಾಜಶೇಖರ್, ಶಿವಕುಮಾರ್ ತಟ್ಟಿ, ಮಾಲತೇಶ್, 19 ಮುಖ್ಯ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು. ರಮೇಶ್ ಹೆಗಡೆ ಪ್ರಾರ್ಥಿಸಿದರು. ಸುರೇಶ್ ಸ್ವಾಗತಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.