ಶನಿವಾರ, ಜನವರಿ 25, 2020
16 °C

ಶಾಸಕರ ಭರವಸೆ: ಉಪವಾಸ ಸತ್ಯಾಗ್ರಹ ಹಿಂದಕ್ಕೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ:  ಮನಗೂಳಿ–ದೇವಾಪುರ ರಾಜ್ಯ ಹೆದ್ದಾರಿ ಕಾಮಗಾರಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ಕಳೆದ 22 ದಿಗಳಿಂದ ನಡೆಸುತ್ತಿದ್ದ ಸರಣಿ ಉಪವಾಸ ಸತ್ಯಾಗ್ರಹಕ್ಕೆ ಮಂಗಳವಾರ ಅಂತ್ಯ   ಹಾಡಲಾಯಿತು.ಮಂಗಳವಾರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ  ಮಾತನಾಡಿದ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ), ದೇವಾಪುರ ಮನಗೂಳಿ ರಾಜ್ಯ ಹೆದ್ದಾರಿ ಕುರಿತು  ವಿಶ್ವ ಬ್ಯಾಂಕ್ ನಿಯೋಗದ ಸಭೆ ನಡೆಯುತ್ತಿದೆ.  ಈಗಾಗಲೇ ವಿಶ್ವಬ್ಯಾಂಕ್ ಆರ್ಥಿಕ ನೆರವು ನೀಡಲು ತಾಂತ್ರಿಕ ಒಪ್ಪಿಗೆ ಸೂಚಿಸಿದೆ. ಈ ಕಾರ್ಯ ವಿಳಂಬವಾದಲ್ಲಿ ರಸ್ತೆ  ಅಭಿವೃದ್ಧಿಗಾಗಿ ಈಗಾಗಲೇ  ₨ 6 ಕೋಟಿ ಹಣ ಬಿಡುಗಡೆಯಾಗಿದೆ. ₨. 19 ಲಕ್ಷ ಹಣ ಮುದ್ದೇಬಿಹಾಳ–ತಾಳಿ ಕೊಟೆ ರಸ್ತೆ ದುರಸ್ತಿಗಾಗಿ ಬಿಡುಗಡೆ ಯಾಗಿದ್ದು, 2 ತಿಂಗಳ ಹಿಂದೆಯೇ ಟೆಂಡರ್‌ ಆಗಿದೆ. ಈ ಕಾಮಗಾರಿಯೂ ಚಾಲ್ತಿ ಇದೆ ಎಂದು ಹೇಳಿದರು.   ಕೆಂಭಾವಿ- ಹುನಗುಂದ ರಸ್ತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ವಿವರಿಸಿದರು.110 ಕೆ.ವ್ಯಾಟ್ ವಿದ್ಯುತ್ ಕಚೇರಿ ಸ್ಥಾಪನೆಗೆ ಟೆಂಡರ್‌ ಆಗಿದೆ. ಗೃಹ ಮಂಡಳಿ ನಿವೇಶನದಲ್ಲಿಯೇ ಇದನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.  ವಿಜ್ಞಾನ ಮಹಾವಿದ್ಯಾಲಯ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಉಪ ನೊಂದಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಾಗಿಯೂ ಅವರು ಆದೇಶ ನೀಡಿದ್ದಾರೆ.ಗೃಹ ಮಂಡಳಿ ಮನೆಗಳನ್ನು ಹಸ್ತಾಂತರಿಸುವ ವರೆಗೂ ಅವುಗಳ ಮೇಲೆ ಬಡ್ಡಿ ವಿಧಿಸ ಲಾಗುವುದಿಲ್ಲ. ಸಾರಿಗೆ ಇಲಾಖೆಗಾಗಿ ಹಣ ಬಿಡುಗಡೆಗೊಳಿಸಲಾಗಿದೆ.    ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಕನಿಷ್ಠ 4 ಎಕರೆ ಜಮೀನು ಸಿಕ್ಕಲ್ಲಿ ಕೆಲಸ ಆರಂಭಿಸಲು ಪ್ರಯತ್ನಿಸುತ್ತೇನೆ.ಒಳ ಚರಂಡಿ ಕಾಮಗಾರಿ ಗುಣಮಟ್ಟ ಗಳನ್ನು ಕಾಯ್ದುಕೊಳ್ಳಲು ಆದೇಶಿಸಲಾ ಗಿದೆ ಎಂದು ತಿಳಿಸಿದ ಅವರು ಈ ಎಲ್ಲ ಕಾರ್ಯಗಳಲ್ಲಿ ಸಾರ್ವಜನಿಕರ ಸಹಕಾರ ಅವಶ್ಯವಿದೆ ಎಂದು ತಿಳಿಸಿ ಇಲ್ಲಿಗೆ ಈ ಹೋರಾಟವನ್ನು ಅಂತ್ಯಗೊಳಿಸಬೇಕು ಎಂದು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ವಿಠಲಸಿಂಗ್ ಹಜೇರಿ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಶಾಸಕರು ನಮ್ಮ  ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ.  ಅವರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾವು         ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ನಂತರ ಶಾಸಕರ ಸಲಹೆಗೆ ಸ್ಪಂದಿಸಿದ ಹೋರಾಟ ಸಮಿತಿಯ ಪದಾಧಿಕಾರಿ ಗಳು ಸತ್ಯಾಗ್ರಹ ಅಂತ್ಯಗೊಳಿಸುವ ನಿರ್ಧಾರ ಪ್ರಕಟಿಸಿದರು.ವೇದಿಕೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಧಶರಥಸಿಂಗ್ ಮನಗೂಳಿ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್.ಪಾಟೀಲ ಯಾಳಗಿ, ಬಿ.ಎಸ್. ಗಬಸಾವಳಗಿ, ಹೋರಾಟ ಸಮಿತಿ ಉಪಾಧ್ಯಕ್ಷ ಆರ್‌.ಎಸ್. ಪಾಟೀಲ, ಬಿ.ಜೆ.ಪಿ ಅಧ್ಯಕ್ಷ ವಿಶ್ವನಾಥ ಬಬಲೇಶ್ವರ, ಕಾರ್ಯದರ್ಶಿ ಕಾಶೀನಾಥ ಮುರಾಳ, ಸಹಕಾರ್ಯದರ್ಶಿ ರಾಮನಗೌಡ ಬಾಗೇವಾಡಿ, ಪುರಸಭೆ ಸದಸ್ಯರಾದ ಪ್ರಕಾಶ ಹಜೇರಿ, ಇಬ್ರಾಹಿಂ  ಮನ್ಸೂರ್‌, ಮಾನಸಿಂಗ್ ಕೊಕಟನೂರ, ಮಂಜೂರ ಬೇಪಾರಿ, ಜೈ ಕರ್ನಾಟಕ ರಾಜ್ಯ ಮಹಿಳಾ ಅಧ್ಯಕ್ಷೆ ನೀಲಮ್ಮ ಪಾಟೀಲ, ಬಾಬು ಬಡಗಣ, ಸಂಭಾಜಿ ವಾಡಕರ, ಗಣಿಸಾಬ ಲಾಹೋರಿ, ಖಾಜಾಹುಸೇನ ಚೌಧರಿ, ಶಶಿಧರ ಡಿಶಲೆ, ರಾಮು ಜಗತಾಪ್, ಶೌಕತ್ ಲಾಹೋರಿ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)