ಶುಕ್ರವಾರ, ಮೇ 29, 2020
27 °C

ಶಾಸಕ ಚರಂತಿಮಠ ಜನ್ಮದಿನ-ಹಣ್ಣು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಸದಸ್ಯ ವೀರಣ್ಣ ಚರಂತಿಮಠ ಜನ್ಮದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಂಗಳವಾರ ಜಿಲ್ಲಾ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್‌ಗಳನ್ನು ಹಂಚಿದರು.ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಕುದರಿಕಾರ, ಬಿಟಿಡಿಎ ಸದಸ್ಯರಾದ ಯಲ್ಲಪ್ಪ ಜಕಾತಿ, ಸಂತೋಷ ಹೊಕ್ರಾಣಿ, ನಗರಸಭೆ ಸದಸ್ಯರಾದ ರೇಖಾ ಹುಲಗಬಾಳಿ, ಭಾಗ್ಯಶ್ರೀ ಹಂಡಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.ರಕ್ತ ತಪಾಸಣೆ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಉಚಿತ ರಕ್ತತಪಾಸಣಾ ಶಿಬಿರ ನಡೆಸಿದರು.ತುರ್ತು ರಕ್ತದ ಅಗತ್ಯವಿರುವ ಸಾರ್ವಜನಿಕರು ಫಾಲಾಕ್ಷ ಕಟ್ಟಿಮಠ (9972841269), ಬಸವರಾಜ ಯಂಕಂಚಿ (9611255433) ಅಥವಾ ಅನಿಲ ತುಪ್ಪದ (9611255422) ಅವರನ್ನು ಸಂಪರ್ಕಿಸಿ ನೆರವು ಪಡೆಯಬಹುದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.