ಬೆಂಗಳೂರು: ಬಿಜೆಪಿ ಶಾಸಕ ಎನ್.ಎಸ್.ನಂದೀಶ ರೆಡ್ಡಿ ಅವರು ಚುನಾಯಿತರಾದ ನಾಲ್ಕು ವರ್ಷಗಳ ಬಳಿಕ ಅಧಿಕಾರ ಕಳೆದುಕೊಳ್ಳಬೇಕಾದ ಅಪರೂಪದ ಆದೇಶವೊಂದು ಹೈಕೋರ್ಟ್ನಿಂದ ಶುಕ್ರವಾರ ಹೊರಬಿದ್ದಿದೆ.

2008ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೆಡ್ಡಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಆದೇಶಿಸಿದ್ದಾರೆ. ಈ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಯಸಿದ್ದ ಕವಿತಾ ಮಹೇಶ್ ಅವರ ನಾಮಪತ್ರವನ್ನು ಪಡೆದುಕೊಳ್ಳದೆ ಚುನಾವಣಾಧಿಕಾರಿ ಎಸಗಿದ ತಪ್ಪಿನಿಂದಾಗಿ ಈ ಆದೇಶ ಹೊರಬಿದ್ದಿದೆ. ಕವಿತಾ ಅವರು ರೆಡ್ಡಿ ವಿರುದ್ಧ 4 ವರ್ಷಗಳ ಕಾನೂನು ಸಮರದಲ್ಲಿ ಜಯ ಸಾಧಿಸಿದ್ದಾರೆ.

ಚುನಾವಣೆ ವೇಳೆ ತಪ್ಪು ಎಸಗಿದ್ದೂ ಅಲ್ಲದೇ, ಕೋರ್ಟ್ಗೆ ಸುಳ್ಳು ಸಾಕ್ಷ್ಯ ನೀಡಿದ ಚುನಾವಣಾಧಿಕಾರಿ ಎಂ.ಅಶೋಕ್ ಅವರನ್ನು ನ್ಯಾಯಮೂರ್ತಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಬಂಧಿತ ಕೋರ್ಟ್ನಲ್ಲಿ ಇವರ ವಿರುದ್ಧ ಮೊಕದ್ದಮೆ ದಾಖಲು ಮಾಡುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ 2008ರ ಏ.23ರಂದು ಕವಿತಾ ನಾಮಪತ್ರ ಸಲ್ಲಿಸಿದ್ದರು. ಆದರೆ ಕೆಲವೊಂದು ಹೆಚ್ಚುವರಿ ದಾಖಲೆಗಳನ್ನು ಅವರು ಹಾಜರು ಪಡಿಸಬೇಕಿತ್ತು. ನಾಮಪತ್ರ ಪರಿಶೀಲನೆ ವೇಳೆ ಆ ದಾಖಲೆಗಳನ್ನು ಹಾಜರು ಪಡಿಸುವುದಾಗಿ ಕವಿತಾ ಕೋರಿದ್ದರು. ಇದಕ್ಕೆ ಕಾನೂನಿನ ಅಡಿ ಅವಕಾಶವೂ ಇತ್ತು.

ಆದರೆ ಚುನಾವಣಾಧಿಕಾರಿಗಳು ಅದನ್ನು ಮಾನ್ಯ ಮಾಡದೇ ನಾಮಪತ್ರ ತಿರಸ್ಕಾರ ಮಾಡಿದರು. ಇದರಿಂದ ಕವಿತಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಲಿಲ್ಲ. ಇದನ್ನು ಅವರು ಚುನಾವಣಾ ತಕರಾರು ಅರ್ಜಿಯ ಮೂಲಕ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಚುನಾವಣಾಧಿಕಾರಿಗಳ ಈ ಕ್ರಮವನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದರು.

ಕೋರ್ಟ್ ಹೇಳಿದ್ದೇನು:  `ಚುನಾವಣಾಧಿಕಾರಿಗಳ ಹುದ್ದೆ ಬಹಳ ಪ್ರಮುಖವಾಗಿರುತ್ತದೆ. ಚುನಾವಣಾ ಫಲಿತಾಂಶ ಹಾಗೂ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ಈ ಹುದ್ದೆಯಲ್ಲಿ ಇರುವವರು ಪಕ್ಷಪಾತದ ಮನೋಭಾವದಿಂದ ದೂರ ಇರಬೇಕು. ಇವರ ಮೂಲ ಕರ್ತವ್ಯ ನಾಮಪತ್ರಗಳನ್ನು ಸ್ವೀಕಾರ ಮಾಡುವುದು. ಒಂದು ವೇಳೆ ನಾಮಪತ್ರ ಅಸ್ವೀಕೃತಗೊಂಡರೆ, ಅದಕ್ಕೆ ಸೂಕ್ತ ಕಾರಣ ನೀಡಬೇಕು. ಆದರೆ ಈ ಪ್ರಕರಣದಲ್ಲಿ ಹಾಗೆ ಮಾಡಿದಂತೆ ನನಗೆ ತೋರುತ್ತಿಲ್ಲ.
`ಚುನಾವಣಾಧಿಕಾರಿಗೆ ಚುನಾವಣೆಗೆ ಸಂಬಂಧಿಸಿದ ಕಾನೂನು, ಚುನಾವಣಾ ಪ್ರಕ್ರಿಯೆ ಇವಷ್ಟೇ ಗೊತ್ತಿದ್ದರೆ ಸಾಲದು. ತಮ್ಮ ಕೆಲಸದ ಮೇಲೆ ಗೌರವ, ಜವಾಬ್ದಾರಿ ಜೊತೆಗೆ ಬದ್ಧತೆಯೂ ಇರಬೇಕಾಗುತ್ತದೆ.

ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಮನೋಭಾವ ಅವರಲ್ಲಿ ಇರುವುದು ಬಹಳ ಮುಖ್ಯ. ಇದುವರೆಗೆ ಅಭ್ಯರ್ಥಿಗೆ ಯಾವುದೇ ವಿದ್ಯಾರ್ಹತೆಯನ್ನು ಗೊತ್ತು ಮಾಡಿಲ್ಲ. ಅವಿದ್ಯಾವಂತ ಕೂಡ ಚುನಾವಣೆಗೆ ಸ್ಪರ್ಧಿಸಬಹುದು. ಇದನ್ನೂ ಚುನಾವಣಾಧಿಕಾರಿ ಗಮನದಲ್ಲಿ ಇಟ್ಟುಕೊಳ್ಳಬೇಕು. ಪ್ರಮುಖ ರಾಜಕೀಯ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಯಾವ ರೀತಿಯ ಕಾಳಜಿ ತೋರಲಾಗುವುದೋ, ಅದೇ ಕಾಳಜಿಯನ್ನು ರಾಜಕೀಯ ಹಿನ್ನೆಲೆ ಇಲ್ಲದ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸುವಾಗಲೂ ತೋರಬೇಕು~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಸುಳ್ಳು ಸಲ್ಲ: `ನ್ಯಾಯಾಲಯದ ಮುಂದೆ ಸತ್ಯವನ್ನೇ ನುಡಿಯಬೇಕು ಎಂಬ ತಿಳಿವಳಿಕೆಯಾದರೂ ಚುನಾವಣಾಧಿಕಾರಿ ಹುದ್ದೆಯಲ್ಲಿ ಇದ್ದವರಿಗೆ ಇರಬೇಕು. ಅವರು ನೀಡುವ ಹೇಳಿಕೆಗಳಲ್ಲಿ ಸತ್ಯಾಂಶ ಇದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಆಗಬೇಕು. ಆದರೆ ಈ ಪ್ರಕರಣದಲ್ಲಿ ಚುನಾವಣಾಧಿಕಾರಿ ಸತ್ಯ ನುಡಿದಿಲ್ಲ ಎಂದು ನನಗೆ ಅನಿಸುತ್ತಿದೆ. ಅರ್ಜಿದಾರರು ನಿಗದಿತ ಅವಧಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ವಿಫಲರಾಗಿದ್ದಾರೆ ಎಂದು ಹೇಳಿಕೆ ನೀಡಿರುವುದು ಶುದ್ಧ ಸುಳ್ಳು. ತಾವು ಮಾಡಿದ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನವನ್ನು ಅವರು ನ್ಯಾಯಾಲಯದ ಮುಂದೆ ಮಾಡಿದ್ದಾರೆ~ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.