ಶಿಕ್ಷಣಕ್ಕೆ ಮಹತ್ವ ನೀಡಿರುವ ಇಸ್ಲಾಂ ಧರ್ಮ

7

ಶಿಕ್ಷಣಕ್ಕೆ ಮಹತ್ವ ನೀಡಿರುವ ಇಸ್ಲಾಂ ಧರ್ಮ

Published:
Updated:

ಗುಲ್ಬರ್ಗ:  ಹಿಂದುಳಿದ ಪ್ರದೇಶವಾಗಿ ರುವ ಗುಲ್ಬರ್ಗದಲ್ಲಿ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಖಾಜಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಭಾರತದಲ್ಲಿ ಸೌದಿ ಅರೇಬಿಯಾದ ರಾಯಭಾರಿಯಾಗಿರುವ ಸಗರ್ ಅಲ್ ಖುರೇಶಿ ಹೇಳಿದರು.ಖಾಜಾ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪದ ಅಂಗವಾಗಿ ನಗರದ ಖಾಜಾ ಬಂದಾನವಾಜ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. “ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿರುವ ಧರ್ಮಗಳಲ್ಲಿ ಇಸ್ಲಾಮ್ ಕೂಡ ಒಂದು. ಮಾನವ ಸಮುದಾಯವನ್ನು ಅಂಧಕಾರದಿಂದ ಬೆಳಕಿನ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿ ಶಿಕ್ಷಣಕ್ಕೆ ಇದೆ. ಮಾನವನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅಗತ್ಯ” ಎಂದು ಅವರು ಪ್ರತಿಪಾದಿಸಿದರು.ರಾಯಭಾರ ಕಚೇರಿಯ ಸಾಂಸ್ಕೃತಿಕ ಅಧಿಕಾರಿ ಡಾ. ಇಬ್ರಾಹಿಮ್ ಅಲ್ಬತ್‌ಶಾನ್ ಮಾತನಾಡಿದರು.

ಯಶಸ್ಸು ಪಡೆಯಲು ಜಗತ್ತಿನಲ್ಲಿ ಇರುವ ಏಕೈಕ ಮಾರ್ಗ ಶಿಕ್ಷಣ ಎಂದು ನುಡಿದರು. ನಿಶಾನ್ ಅತಿಥಿಗಳನ್ನು ಪರಿಚಯಿಸಿದರು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಗರ್ ಅಲ್ ಖುರೇಶಿ ಸನ್ಮಾನಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry