ಬುಧವಾರ, ಮೇ 19, 2021
27 °C

`ಶಿಕ್ಷಣದಲ್ಲಿ ಮುಧೋಳ ಅಭಿವೃದ್ಧಿ ಪಥದಲ್ಲಿದೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ಶಿಕ್ಷಣ ರಂಗದಲ್ಲಿ ಮುಧೋಳ ಪ್ರಗತಿಪಥದತ್ತ ಸಾಗಿದೆ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.

ಸ್ಥಳೀಯ ಬುದ್ನಿ, ಪಿ.ಎಂ ರಸ್ತೆಯ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಕಾಲೇಜಿನ ಪ್ರಯೋಗಾಲಯದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.`ಸರಕಾರಿ ಶಾಲೆ ಎಂದು ಅಸಡ್ಡೆ ಮನೋಭಾವ ಹೊಂದಿರುವವವರಿಗೆ ತಾಲ್ಲೂಕಿನ ಯಡಹಳ್ಳಿ ಪದವಿ ಪೂರ್ವ ಕಾಲೇಜು 100 ರಷ್ಟು ಫಲಿತಾಂಶ ತೋರಿಸಿ ತನ್ನತ್ತ ಪಾಲಕರ ಗಮನ ಸೆಳೆದಿದೆ' ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಭೀಮಸಿ ಹಲಕಿ, ವೆಂಕಣ್ಣ ಗಿಡ್ಡಪ್ಪನವರ, ಎಇಇ ಕೆ.ವಿ ಪಾಟೀಲ್  ವಿ.ಕೆ. ಕಕರಡ್ಡಿ ಪ್ರಾಚಾರ್ಯ ಎನ್.ಎಲ್. ತೇರದಾಳ ಎಸ್.ಟಿ. ಕೊಕಟನೂರ, ಎನ್.ಎಮ್. ಯಂಬತ್ತನಾಳ, ಎ.ಎಲ್ ಲಾಲಸಂಗಿ, ಬಿ.ಎಮ್. ಬಡಿಗೇರ, ಗೀತಾಂಜಲಿ ಶ್ರೀನಿವಾಸರಾವ್ ಉಪಸ್ಥಿತರಿದ್ದರು.ಮುಧೋಳದಲ್ಲಿ ಎಂಜಿನಿಯರಿಂಗ್ ಕಾಲೇಜು: `ಬಾಗಲಕೋಟೆಯ ಬವಿವಿ ಸಂಘದಿಂದ ಗುರುಬಸವ ಹೆಸರಲ್ಲಿ ಮುಧೋಳ ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಆಗಿದ್ದು , ತಾಂತ್ರಿಕ ಪದವಿ ಪಡೆಯಲು ಈ ಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೇರೆ ಊರುಗಳಿಗೆ ಹೋಗಬೇಕಾಗಿಲ್ಲ' ಎಂದು  ಮಾಜಿ ಸಚಿವ ಶಾಸಕ ಗೋವಿಂದ ಕಾರಜೋಳ ಹೇಳಿದರು.ಸ್ಥಳೀಯ ಬವಿವಿ ಸಂಘದ ಆವರಣದಲ್ಲಿ ನಿರ್ಮಾಣವಾದ ಮುಕ್ತಾಯ ಹಂತದಲ್ಲಿರುವ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಕಾಮಗಾರಿ ವೀಕ್ಷಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ, `ಗುರುಬಸವ ಎಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿ ಶೈಕ್ಷಣಿಕ ವರ್ಷವಾದ ಜುಲೈ ತಿಂಗಳಲ್ಲಿ ವರ್ಗಗಳು ಪ್ರಾರಂಭವಾಗಲಿದ್ದು ಇಲ್ಲಿ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ವಿಷಯಗಳು ಲಭ್ಯವಿವೆ.ಕಾಮೆಡ್ ಕೆ ಪ್ರಕಾರ  ಡೊನೇಶನ್ ರಹಿತ ಕೇವಲ ಫೀ ಮಾತ್ರ ತೆಗೆದುಕೊಂಡು ಇಲ್ಲಿ ಪ್ರವೇಶಗಳನ್ನು ನೀಡಲಾಗುತ್ತದೆ. ಒಟ್ಟು 240 ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಲ್ಲಿ 75 ಸಿಇಟಿ 25 ಆಡಳಿತ ಮಂಡಳಿ ಸೀಟು ಎಂದು ಪ್ರವೇಶಗಳು ಇಲ್ಲಿ ದೊರೆಯುತ್ತವೆ. ಮೂಲ ಸೌಲಭ್ಯಗಳನ್ನೆಲ್ಲವನ್ನು ಒದಗಿಸಿದ್ದು ಅವಶ್ಯಕ ಸಿಬ್ಬಂದಿಯನ್ನು ಭರ್ತಿ ಮಾಡಲಾಗಿದೆ' ಎಂದು ಚರಂತಿಮಠ ವಿವರಿಸಿದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಬಸವರಾಜ ಗುಡಿಸಾಗರ, ಗುರುರಾಜ ಕಟ್ಟಿ, ಉದಯ ಸಾರವಾಡ  ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.ಪ್ರಗತಿ ಪರಿಶೀಲನಾ ಸಭೆ 29ಕ್ಕೆ

ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆಯಲ್ಲಿ ಇದೇ 29 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.