ಶುಕ್ರವಾರ, ಮೇ 14, 2021
25 °C

ಶಿಕ್ಷಣ ಕ್ಷೇತ್ರ ಶುದ್ಧೀಕರಣ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ ನೇತೃತ್ವದ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರೀಕರಣ, ಖಾಸಗೀಕರಣದ ಜೊತೆಗೆ ಕೇಸರೀಕರಣಗೊಳಿಸಿ ಅಧೋಗತಿಗೆ ತಳ್ಳಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಸಮೂಹದ ಆಶೋತ್ತರಗಳಿಗೆ ಸ್ಪಂದಿಸಿ ಶಿಕ್ಷಣ ಕ್ಷೇತ್ರವನ್ನು ಶುದ್ಧೀಕರಿಸಬೇಕು ಎಂದು   ಭಾರತ ವಿದ್ಯಾರ್ಥಿ ಫೆಡರೇಷನ್ ಆಗ್ರಹಿಸಿದೆ.ಗುರುವಾರ ಸಹಾಯಕ ಆಯುಕ್ತರ ಕಚೇರಿ ಶಿರಸ್ತೆದಾರ ಭಾನುಮತಿ ಅವರ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಅರ್ಪಿಸಿದ ಕಾರ್ಯಕರ್ತರು, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅವೈಜ್ಞಾನಿಕ ಬದಲಾವಣೆಗಳನ್ನು ತಿರಸ್ಕರಿಸಿ ವಿನೂತನ ಯೋಜನೆ ನೀಡಬೇಕು ಎಂದು ಮನವಿ ಮಾಡಿದರು.ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ಡೊನೇಷನ್ ಹಾವಳಿ ನಿಯಂತ್ರಿಸಬೇಕು. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಮುಚ್ಚಿರುವ ಶಾಲೆಗಳನ್ನು ಪುನಶ್ಚೇತನಗೊಳಿಸಬೇಕು. ಕೇಸರೀಕರಣಕ್ಕೆ ತಿಲಾಂಜಲಿ ಹಾಡಬೇಕು. ವಸತಿ ನಿಲಯಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಖಾಸಗಿ ವಿಶ್ವ ವಿದ್ಯಾಲಯ ಸ್ಥಾಪನೆ ಸೇರಿದಂತೆ ಜನವಿರೋಧಿ ಅಂಶಗಳನ್ನು ಮಾಪಾರ್ಡಡು ಮಾಡುವಂತೆ ಮನವಿಯಲ್ಲಿ ವಿವರಿಸಿದ್ದಾರೆ.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಂಗನಾಥ. ಮುಖಂಡರಾದ ಪ್ರಶಾಂತ, ಗುರುಪಾದಪ್ಪ ನಾಯಿಕೊಡಿ, ರಮೇಶ ಜಿಂಕಿ, ಅಮರೇಶ ನಾಯಿಕೊಡಿ, ಯಂಕೋಬ ತಾಳಿಕೋಟ, ರಹಿಮಾನ್, ಶಿವಾನಂದ ಜಾಲಹಳ್ಳಿ, ಹನುಮಗೌಡ, ಉಮೇಶ, ಪರಶುರಾಮ, ಸಾರೆಪ್ಪ ಗಲಗ, ನಿಂಗಪ್ಪ, ಹನುಮಂತ, ಅಜೇಯ್, ರಮೇಶ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.