ಬೆಂಗಳೂರು: ಪಿಪಿಬಿಎ ಕ್ಲಬ್ನ ಶಿಖಾ ಗೌತಮ್ ಮತ್ತು ಅನೂಪ್ ಶ್ರೀಧರ್ ಲೀ ನಿಂಗ್ ಫೈವ್ ಸ್ಟಾರ್ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್ನಲ್ಲಿ ಶುಕ್ರವಾರ ನಡೆದ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಶಿಖಾ 13-21, 21-13, 21-19ರಲ್ಲಿ ಜಾಕ್ವೆಲಿನ್ ರೋಸ್ ಕುನ್ನತ್ ಅವರನ್ನು ಮಣಿಸಿದರು. ಪುರುಷರ ವಿಭಾಗದ ಪ್ರಶಸ್ತಿ ಘಟ್ಟದ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಅನೂಪ್ 21-17, 21-13ರಲ್ಲಿ ಧಾರವಾಡದ ಅಭಿಷೇಕ್ ಯಲಿಗಾರ್ ಎದುರು ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿದರು.

ಪುರುಷರ ವಿಭಾಗದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅಭಿಷೇಕ್ 21-17, 21-7 (ನಿವೃತ್ತಿ) ಭಾರತ ಕ್ರೀಡಾ ಪ್ರಾಧಿಕಾರದ ಸೂರಜ್ ಆರ್.ಎನ್. ಮೇಲೂ, ಅನೂಪ್ 21-19, 21-15ರಲ್ಲಿ ಪಿಪಿಬಿಎ ಕ್ಲಬ್ನ ಎಸ್. ಡೇನಿಯಲ್ ಫರೀದ್ ವಿರುದ್ಧವೂ ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದರು.

ಆದರ್ಶ್ ಜೋಡಿಗೆ ಡಬಲ್ಸ್ ಪ್ರಶಸ್ತಿ: ಅಗ್ರ ಶ್ರೇಯಾಂಕದ ಆದರ್ಶ್ ಕುಮಾರ್ ಎಸ್. ಹಾಗೂ ವೆಂಕಟೇಶ್ ಪ್ರಸಾದ್ ಜೋಡಿ ಪುರುಷರ ವಿಭಾಗದ ಡಬಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ಈ ಜೋಡಿ 22-20, 21-12ರಲ್ಲಿ ಗುರುಪ್ರಸಾದ್ ಡಿ- ಕೆನರಾ ಬ್ಯಾಂಕ್ನ ಎಂ. ವಿನೀತ್ ಎದುರು ಗೆಲುವು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.