ಶಿಗ್ಗಾಂವ: ದೇಶದದಲ್ಲಿಯೇ ಪ್ರಥಮ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸ್ತಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಇಲ್ಲಿನ ರಾಜ್ಯ ಜಾನಪದ ಅಕಾಡೆಮಿ, ಹುಬ್ಬಳ್ಳಿಯ ಗಂಗಮ್ಮಾ ತಾಯಿ ಬೊಮ್ಮಾಯಿ ಟ್ರಸ್ಟ್, ಜಾನಪದ ಕಲಾವಿದರು ಹಾಗೂ ಸಾರ್ವಜನಿಕರು ಮಾ.20 ರಂದು ಶಿಗ್ಗಾಂವದಲ್ಲಿ ‘ಜಾನಪದ ಸಂಭ್ರಮ’ ಎಂಬ ವಿನೂತ ಕಾರ್ಯ ಕ್ರಮವನ್ನು ಆಯೋಜಿಸಿದ್ದಾರೆ.

ಬುಧವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜಾನಪದ ಕಲಾವಿದರು, ಕವಿ-ಸಾಹಿತಿಗಳು, ಕಲಾಕಾರರು ಹಾಗೂ ಅನೇಕ ರಾಜಕಾರಣಿಗಳು ಈ ಬ್ರಹತ ಜಾನಪದ ಮೆರವಣೆಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮೆರವಣಿಗೆಯಲ್ಲಿ ಜಗ್ಗಲಗಿ, ಕರಡಿ ಮಜಲು, ಹೆಜ್ಜೆಮೇಳ, ವೀರಗಾಸೆ, ಲಂಬಾಣಿ ನೃತ್ಯ, ಕಿಲು ಕುದುರೆ, ಭಜನಾ ತಂಡಗಳು, ದೊಡ್ಡಾಟಗಳ ವೇಷಧಾರಣೆ, ಕೋಲಾಟಿಗಳು, ಕಹಳೆ ಅಲ್ಲದೇ ರಾಜ್ಯ, ರಾಷ್ಟ್ರೀಯ ಮಟ್ಟದ ಸಾಧಕರ, ಮಹಾತ್ಮರ, ಸಾಧು-ಸಂತರ ವೇಷಧಾರಿಗಳು ಸೇರಿದಂತೆ ಅನೇಕ ವಾದ್ಯ ವೃಂದಗಳ ಮೂಲಕ ಭವ್ಯ ಮೆರವಣೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುವುದು ಎಂದರು.

ಕಾರ್ಯಕ್ರಮದ ವ್ಯವಸ್ಥೆಗಾಗಿ ಈಗಾಗಲೆ ಸ್ವಾಗತ ಸಮಿತಿ, ಪ್ರಚಾರ ಸಮಿತಿ, ಭೋಜನ ಸಮಿತಿ, ಮೆರವಣಿಗೆ, ವೇದಿಕೆ, ಹಣಕಾಸು ಹಾಗೂ ಸಾಂಸ್ಕೃತಿಕ ಸಮಿತಿಗಳನ್ನು ರಚಿಸಲಾಗಿದೆ. ಸುಮಾರು 25 ರಿಂದ 30 ಸಾವಿರ ಜನರು ಕಳಿತು ವೀಕ್ಷಿಸುವಂತಹ ಭವ್ಯ ವೇದಿಕೆಯನ್ನು ಸಿದ್ದಗೊಳಿಸಲಾಗುತ್ತಿದೆ. ವರನಟ ಡಾ.ರಾಜಕುಮಾರ ಅವರ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿನ ದೃಶ್ಯದ ರೂಪಕವನ್ನು ರಾಕ್ ಗಾರ್ಡನ್ನ ಕರ್ತುೃ ಸೊಲಬಕ್ಕನವರ ಆಯೋಜಿಸಲಿದ್ದಾರೆ ಎಂದು ಹೇಳಿದರು.

ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಬ.ಫ.ಯಲಿಗಾರ, ಶಿಷ್ಟಕ್ಕೆ ಅನೇಕ ವಿಶ್ವವಿದ್ಯಾಲಯಗಳಿದ್ದು, ಜನಪದಕ್ಕೆ ಪ್ರತ್ಯೇಕ ವಿಶ್ವ ವಿದ್ಯಾಲಯಗಳಿರಲಿಲ್ಲ. ಪ್ರತಿ ವಿಶ್ವ ವಿದ್ಯಾಲಯಗಳಲ್ಲಿ ಜನಪದಕ್ಕೊಂದು ಪೀಠವನ್ನು ನಿರ್ಮಿಸಲಾಗಿದೆ. ಆದರೆ ಜಗತ್ತಿನಲ್ಲಿಯೇ ಪ್ರಪ್ರಥಮ ಬಾರಿಗೆ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಿರುವುದು ಈ ಭಾಗದ ಜನರಿಗೆ ಹರ್ಷದಾಯಕವಾಗಿದೆ ಎಂದು ಹೇಳಿದರು.

ಕಸಾಪ ಶಂಕರಗೌಡ್ರ ಪಾಟೀಲ, ಸಾಹಿತಿ ಡಾ. ರಾಮೂ ಮೂಲಗಿ, ಶಿವಾನಂದ ಮ್ಯಾಗೇರಿ, ರಾಜ್ಯ ಸಹಕಾರಿ ಧುರೀಣ ಸದಸ್ಯ ಎಚ್.ಆರ್. ದುಂಡಿಗೌಡ್ರ, ಜಯಣ್ಣ ಹೆಸರೂರ, ನಾಗರಾಜ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.