ಜೈಪುರ (ಪಿಟಿಐ): ಕೊನೆಯ ಓವರ್ನ ಆರು ಎಸೆತಗಳಲ್ಲಿ ಉಭಯ ತಂಡಗಳ ಆಟಗಾರರಲ್ಲೂ ಆತಂಕ ಮನೆ ಮಾಡಿತ್ತು. ಪಂದ್ಯ ಕೈ ಜಾರಿ ಯಾರ ಮಡಿಲು ಸೇರುತ್ತದೆಯೋ ಎನ್ನುವು ದಿಗಿಲು. ಆದರೆ 20ನೇ ಓವರ್ನ ಮೂರನೇ ಎಸೆತದಲ್ಲಿ ರಾಸ್ ಟೇಲರ್ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸುತ್ತಿದ್ದಂತೆಯೇ ಶೇನ್ ವಾರ್ನ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರರಲ್ಲಿ ಸಂಭ್ರಮ!.

ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಆರು ವಿಕೆಟ್ಗಳ ಭರ್ಜರಿ ಗೆಲುವು ಪಡೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತು. ಕಳೆದ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ‘ಶಾಕ್’ ನೀಡಿದ್ದ ವಾರ್ನ್ ಬಳಗ ಈಗ ಮತ್ತೆ ಗೆಲುವಿನ ಅಲೆಯಲ್ಲಿ ತೇಲಿತು.
ರಾಯಲ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಈ ಟೂರ್ನಿಯಲ್ಲಿ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ತಂಡಗಳೇ ಹೆಚ್ಚು ವಿಜಯಿಯಾಗುತ್ತಿರುವುದು ವಾರ್ನ್ ಫೀಲ್ಡಿಂಗ್ ಆಯ್ದುಕೊಳ್ಳಲು ಕಾರಣವಾಗಿರಬಹುದು. ಪಂದ್ಯ ಗೆದ್ದ ನಂತರ ಟಾಸ್ ವಿಷಯದಲ್ಲಿ ತಾವು ತಗೆದುಕೊಂಡ ನಿರ್ಧಾರ ಸರಿಯಾಗಿಯೇ ಇತ್ತು ಎಂದು ವಾರ್ನ್ ಸಮರ್ಥಿಸಿಕೊಂಡರು.

ಮೊದಲು ಬ್ಯಾಟ್ ಮಾಡಿದ ಯುವರಾಜ್ ಸಿಂಗ್ ನೇತೃತ್ವದ ಪುಣೆ ವಾರಿಯರ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 143 ರನ್ಗಳನ್ನು ಗಳಿಸಿತು. ಈ ಮೊತ್ತಕ್ಕೆ ತಕ್ಕ ಉತ್ತರ ನೀಡಿದ ರಾಜಸ್ತಾನ ರಾಯಲ್ಸ್ ಯಾವುದೇ ಅಪಾಯಕ್ಕೆ ಅವಕಾಶ ನೀಡದಂತೆ ಇನ್ನೂ ಮೂರು ಎಸೆತ ಬಾಕಿ ಇರುವಾಗಲೇ ನಾಲ್ಕು ವಿಕೆಟ್ ಕಳೆದುಕೊಂಡು 144 ರನ್ ಗಳಿಸಿ ಗೆಲುವಿನ ದಡ ಸೇರಿತು. ಇದರೊಂದಿಗೆ 11 ಪಾಯಿಂಟ್ಗಳೊಂದಿಗೆ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪುಣೆ ತಂಡದ ಆರಂಭಿಕ ಆಟಗಾರ ಜೆಸ್ಸಿ ರೈಡರ್ ಔಟಾದ ನಂತರ ರಾಬಿನ್ ಉತ್ತಪ್ಪ (35, 21ಎಸೆತ, 7ಬೌಂ) ಗಳಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಾಣುವುದನ್ನು ತಡೆದರು. ಒಂದು ಹಂತದಲ್ಲಿ ಪುಣೆ ಉತ್ತಮ ರನ್ ಸರಾಸರಿಯನ್ನು ಹೊಂದಿತ್ತು 12 ಓವರ್ಗಳಾದಾಗ ಮೂರು ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ಉತ್ತಮ ಮೊತ್ತವನ್ನು ಗಳಿಸುವ ಹಾದಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್ಮನ್ಗಳು ವಿಫಲರಾದರು. ರಾಹುಲ್ ಶರ್ಮ ಹಾಗೂ ಮುರಳಿ ಕಾರ್ತಿಕ್ ‘ಸೊನ್ನೆ’ ಸುತ್ತಿದರು. ಪ್ರಮುಖ 2 ವಿಕೆಟ್ ಕಬಳಿಸಿದ ಎಸ್.ಕೆ. ತ್ರಿವೇದಿ ಗಮನ ಸೆಳದರು.

ಈ ಮೊತ್ತಕ್ಕೆ ಆತ್ಮ ವಿಶ್ವಾಸದಿಂದಲೇ ಉತ್ತರ ನೀಡಿದ ರಾಯಲ್ಸ್ ತಂಡ ರಾಸ್ ಟೇಲರ್ (47, 35ಎಸೆತ, 4ಬೌಂ, 2ಸಿಕ್ಸರ್) ನೆರವಿನಿಂದ ಗೆಲುವಿನ ದಡ ಮುಟ್ಟಿತು. ಆರಂಭಿಕ ಆಟಗಾರರಾದ ಶೇನ್ ವ್ಯಾಟ್ಸನ್ (12, 14ಎಸೆತ, 1ಸಿಕ್ಸರ್) ಹಾಗೂ ರಾಹುಲ್ ದ್ರಾವಿಡ್ (18, 20ಎಸೆತ, 2ಬೌಂ) ಗಳಿಸಿ ಪೆವಿಲಿಯನ್ ಹಾದಿ ತುಳಿದರು.

ನಾಲ್ಕು ಓವರ್ಗಳಲ್ಲಿ ಕೇವಲ 13 ರನ್ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್ಗಳನ್ನು ಕಬಳಿಸಿದ ರಾಹುಲ್ ಶರ್ಮ ಪುಣೆ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ನಾಲ್ಕನೇ ವಿಕೆಟ್ಗೆ ಜೊತೆಗೂಡಿದ ರಾಸ್ ಟೇಲರ್ ಯಾವುದೇ ಅಪಾಯಕ್ಕೆ ಅವಕಾಶ ನೀಡಲಿಲ್ಲ. ಟೇಲರ್ ಹಾಗೂ ರೆಹಾನೆ ಐದನೇ ವಿಕೆಟ್ಗೆ ಅಜೇಯ 52 ರನ್ಗಳ ಅಮೂಲ್ಯ ಜೊತೆಯಾಟವಾಡಿದರು.

ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರಿದ ಪುಣೆ ಕೊನೆಗೆ ಸೋಲಿನ ದಂಡ ತೆತ್ತಬೇಕಾಯಿತು. ‘ನಮ್ಮ ತಂಡದ ಆಟಗಾರರು ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ತೋರಿದರು. ಆದ್ದರಿಂದಲೇ ಪಂದ್ಯ ನಮ್ಮ ಕೈ ಜಾರಿ ಹೋಯಿತು’ ಎಂದು ಪುಣೆ ತಂಡದ ನಾಯಕ ಯುವರಾಜ ಸಿಂಗ್ ಪಂದ್ಯದ ನಂತರ ಹೇಳಿದರು. ಮೂರು ಕ್ಯಾಚ್ಗಳನ್ನು ಬಿಟ್ಟಿದ್ದು. ಜಸ್ಸಿ ರೈಡರ್ ಆರಂಭದಲ್ಲಿಯೇ ಬ್ಯಾಟಿಂಗ್ನಲ್ಲಿ ವಿಫಲವಾಗಿದ್ದು ನಮ್ಮ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಯುವಿ ಬೇಸರ ವ್ಯಕ್ತಪಡಿಸಿದರು.

ಸ್ಕೋರ್ ವಿವರ

ಪುಣೆ ವಾರಿಯರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 143

ಜೆಸ್ಸಿ ರೈಡರ್ ಸ್ಟಂಪ್ಡ್ ಯಾಗ್ನಿಕ್ ಬಿ ಬೋಥಾ 18
ಮನೀಷ್ ಪಾಂಡೆ ಸಿ ಟೇಲರ್ ಬಿ ತ್ರಿವೇದಿ 30
ರಾಬಿನ್ ಉತ್ತಪ್ಪ ಸಿ ಯಾಗ್ನಿಕ್ ಬಿ ವಾರ್ನ್ 35
ಯುವರಾಜ್ ಸಿಂಗ್ ರನ್ಔಟ್ (ತ್ರಿವೇದಿ) 07
ಹರ್ಪ್ರೀತ್ ಸಿಂಗ್ ಸಿ ರಹಾನೆ ಬಿ ವ್ಯಾಟ್ಸನ್ 13
ಮಿಥುನ್ ಮನ್ಹಾಸ್ ಸಿ ಬಿನ್ನಿ ಬಿ ತಿವಾರಿ 24
ನಥಾನ್ ಮೆಕ್ಲಮ್ ಔಟಾಗದೇ 11
ರಾಹುಲ್ ಶರ್ಮ ರನ್ಔಟ್ (ಯಾಗ್ನಿಕ್/ತ್ರಿವೇದಿ) 00
ಮುರಳಿ ಕಾರ್ತಿಕ್ ಔಟಾಗದೆ 00

ಇತರೆ: (ಬೈ-1, ಲೆಗ್ ಬೈ-2, ವೈಡ್-2 ) 05
ವಿಕೆಟ್ ಪತನ: 1-24 (ರೈಡರ್; 2.4), 2-70 (ಉತ್ತಪ್ಪ; 8.2), 3-91 (ಯುವರಾಜ್ ಸಿಂಗ್; 12.1), 4-93 (ಪಾಂಡೆ 12.5), 5-121 (ಹರ್ಪ್ರೀತ್ ಸಿಂಗ್ 18.1), 6-134 (ಮನ್ಹಾಸ್; 19.2), 7-135 (ಶರ್ಮ 19.4).
ಬೌಲಿಂಗ್: ಜಾನ್ ಬೋಥಾ 4-0-23-1, ಅಶೋಕ್ ಮನೇರಿಯಾ 1-0-10-0, ಶೇನ್ ವ್ಯಾಟ್ಸನ್ 4-0-19-1, ಅಮಿತ್ ಸಿಂಗ್ 3-0-19-0, ಶೇನ್ ವಾರ್ನ್ 4-0-31-1, ಎಸ್.ಕೆ. ತ್ರಿವೇದಿ 4-0-28-2.

ರಾಜಸ್ತಾನ್ ರಾಯಲ್ಸ್ 19.3 ಓವರ್ಗಳಲ್ಲಿ 4 ವಿಕೆಟ್ಗೆ 144

ಶೇನ್ ವ್ಯಾಟ್ಸನ್ ಸಿ ಉತ್ತಪ್ಪ ಬಿ ಥಾಮಸ್ 12
ರಾಹುಲ್ ದ್ರಾವಿಡ್ ಸಿ ಮತ್ತು ಶರ್ಮ 18
ಜಾನ್ ಬೋಥಾ ಎಲ್ಬಿಡಬ್ಲ್ಯು ಬಿ ಶರ್ಮ 12
ಅಶೋಕ್ ಮನೇರಿಯ ಸಿ ಥಾಮಸ್ ಬಿ ಶರ್ಮ 29
ರಾಸ್ ಟೇಲರ್ ಔಟಾಗದೇ 47
ಆಜಿಂಕ್ಯ ರಹಾನೆ ಔಟಾಗದೇ 15
ಇತರೆ: (ಬೈ-6, ಲೆಗ್ ಬೈ-3, ವೈಡ್-1, ನೋಬಾಲ್-1) 11
ವಿಕೆಟ್ ಪತನ: 1-29 (ವ್ಯಾಟ್ಸನ್; 4.2), 2-43 (ದ್ರಾವಿಡ್; 7.1), 3-59 (ಬೋಥಾ; 10.1), 4-92 (ಮನೇರಿಯ; 14.1)
ಬೌಲಿಂಗ್: ಮುರಳಿ ಕಾರ್ತಿಕ್ 4-0-41-0, ಥಾಮಸ್ 4-1-28-1, ರಾಹುಲ್ ಶರ್ಮ 4-1-13-3, ಜೆರೊಮಿ ಟೇಲರ್ 3.3-0-22-0, ಯುವರಾಜ್ 1-0-9-0, ನಥಾನ್ ಮೆಕ್ಲಮ್ 3-0-22-0.

ಫಲಿತಾಂಶ: ರಾಜಸ್ತಾನ ರಾಯಲ್ಸ್ ತಂಡಕ್ಕೆ 6 ವಿಕೆಟ್ ಜಯ
ಪಂದ್ಯಶ್ರೇಷ್ಠ: ರಾಸ್ ಟೇಲರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.