ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ ಪ್ರಕಟ

7

ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ ಪ್ರಕಟ

Published:
Updated:

ಬೆಂಗಳೂರು: ಶಿವಮೊಗ್ಗ ಕರ್ನಾಟಕ ಸಂಘವು ಸಂಶೋಧನೆ, ಮಕ್ಕಳ ಸಾಹಿತ್ಯ, ಕಾವ್ಯ ಮತ್ತು ವಿಮರ್ಶೆ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಗಣ್ಯರಿಗೆ ನೀಡುವ 2011ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟ ಮಾಡಿದೆ.ಶಂಬಾ ಜೋಶಿ ಪ್ರಶಸ್ತಿ- ಸಂಶೋಧಕ ಕೆಳದಿ ಗುಂಡಾ ಜೋಯಿಸ್, ಡಾ.ಶಿವರಾಮ ಕಾರಂತ ಪ್ರಶಸ್ತಿ- ಮಕ್ಕಳ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ, ಡಾ.ದ.ರಾ.ಬೇಂದ್ರೆ ಪ್ರಶಸ್ತಿ- ಕವಿ ಡಾ.ನಿಸಾರ್ ಅಹಮದ್ ಮತ್ತು ತೀ.ನಂ.ಶ್ರೀಕಂಠಯ್ಯ ಪ್ರಶಸ್ತಿಯನ್ನು ವಿಮರ್ಶಕ ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರಿಗೆ ನೀಡಿದೆ.ಪ್ರಶಸ್ತಿಯು ರೂ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ನವೆಂಬರ್ 23ರಿಂದ 30ರವರೆಗೆ ನಡೆಯುವ ಕರ್ನಾಟಕ ಸಂಘದ 81ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry