ಮಂಗಳವಾರ, ಜೂನ್ 15, 2021
26 °C

ಶಿವಮೊಗ್ಗ: ಮನಸೂರೆಗೊಂಡ ಟಗರು ಕಾಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಎಲ್ಲಿ ನೋಡಿದರೂ ಜನ ಸಮೂಹ. ಕೇಕೆ ಹಾಗೂ ಸಿಳ್ಳೆ ಹೊಡೆಯುವುದರಲ್ಲಿ ನಿರತವಾಗಿದ್ದ ಸಮೂಹ. ಗೆಲ್ಲುತ್ತೇವೆಂಬ ವಿಶ್ವಾಸದಿಂದ ಬೀಗುತ್ತಿದ್ದ ಟಗರು ಮಾಲೀಕರು.ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ ಕೋಟೆ ಮಾರಿಕಾಂಬ ಸೇವಾ ಸಮಿತಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ ಟಗರು ಕಾಳಗದ ಸಂದರ್ಭದಲ್ಲಿ ಕಂಡುಬಂದ ದೃಶ್ಯ.ಟಗರು ಕಾಳಗ ಪ್ರಾರಂಭವಾದ ತಕ್ಷಣ ಪ್ರತಿಯೊಬ್ಬರು ಸಿಳ್ಳೆ ಹೊಡೆಯುವುದರ ಮೂಲಕ ತಮ್ಮ ನೆಚ್ಚಿನ ಟಗರಿಗೆ ಬೆಂಬಲ ವ್ಯಕ್ತಪಡಿಸುತ್ತಿದುದು ಸಾಮಾನ್ಯವಾಗಿತ್ತು. ಆಗೊಮ್ಮೆ, ಈಗೊಮ್ಮೆ ನೂಕು ನುಗ್ಗಲಿನಿಂದ ಸಾರ್ವಜನಿಕರು ಪರದಾಡುವಂತಾಯಿತು.

ಟಗರು ಕಾಳಗದಲ್ಲಿ ರಾಜ್ಯದ ಸುಮಾರು 200ಕುರಿಗಳು ಭಾಗವಹಿಸಿದ್ದವು.ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ, ಉತ್ತರ ಕರ್ನಾಟಕದ ಗದಗ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳ ಕುರಿಗಳು ಕಾಳಗದಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.ಎಂಟು ಹಲ್ಲಿನ ಟಗರು ವಿಭಾಗದಲ್ಲಿ ಶಿವಮೊಗ್ಗ ನಗರದ ಮಚ್ಚಾ ‘ಎ’ (ಪ್ರಥಮ), ಮಚ್ಚಾ ‘ಬಿ’ (ದ್ವಿತೀಯ), ನಾಲ್ಕು ಹಲ್ಲಿನ ಟಗರು ವಿಭಾಗದಲ್ಲಿ ಶಿವಮೊಗ್ಗದ ಕೆಂಪರಾಜ ಪ್ರಸನ್ನ (ಪ್ರಥಮ), ರಾಣೆಬೆನ್ನೂರಿನ ಗಜಕೇಸರಿ (ದ್ವಿತೀಯ), ಎರಡು ಹಲ್ಲಿನ ಟಗರು ವಿಭಾಗದಲ್ಲಿ ವಿದ್ಯಾನಗರದ ಜಗದಾಂಬ ಪ್ರಸನ್ನ (ಪ್ರಥಮ) ಹಾಗೂ ಬಜರಂಗಿ (ದ್ವಿತೀಯ) ಸ್ಥಾನಗಳನ್ನು ಪಡೆದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.