ಮಂಗಳವಾರ, ಜೂನ್ 15, 2021
27 °C

ಶಿವಾಜಿನಗರದ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಹಗಲು ದರೋಡೆ

ಎನ್‌. ಚಂದರ್‌ Updated:

ಅಕ್ಷರ ಗಾತ್ರ : | |

ಶಿವಾಜಿನಗರದಲ್ಲಿನ ಬಿಎಂಟಿಸಿ ಬಸ್ ನಿಲ್ದಾಣವು ಅತ್ಯಂತ ದಟ್ಟ ಜನಸಂದಣಿಯ ಕೇಂದ್ರವಾಗಿದೆ. ಈ ಬಸ್‌ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಂಚಾರಿ ನಿಗಮವು ಹಲವು ಮೂತ್ರಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿದೆ. ಪ್ರಯಾಣಿಕರು ಮೂತ್ರಾಲಯವನ್ನು ಉಚಿತವಾಗಿ ಉಪಯೋಗಿಸಬಹುದೆಂಬ ನಾಮಫಲಕಗಳು ಬಸ್‌ ನಿಲ್ದಾಣದ ಎಲ್ಲಾ ಕಡೆ ರಾರಾಜಿಸುತ್ತಿವೆ.ಆದರೆ ಕೆಲವರು ನಾಮಫಲಕದ ಮೇಲೆ ಇರುವ ಉಚಿತ ಎಂಬ ಪದಗಳ ಮೇಲೆ ಖಾಸಗಿ ಜಾಹೀರಾತು ಚೀಟಿ ಅಂಟಿಸಿ, ಮೂತ್ರಾಲಯವನ್ನು ಉಪಯೋಗಿಸುವವರ ಹತ್ತಿರ ಹಣವನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ.ಬಸ್‌ ನಿಲ್ದಾಣದಲ್ಲಿರುವ ಬಿಎಂಟಿಸಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಜಾಣ ಕುರುಡು, ಜಾಣ ಕಿವುಡರಂತೆ ವರ್ತಿಸಿ ಮೂತ್ರಾಲಯ ಮಾಫಿಯಾಗಳ ಹಗಲು ದರೋಡೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಅನುಮಾನಕ್ಕೆ ಕಾರಣರಾಗಿದ್ದಾರೆ.ಸಾರಿಗೆ ಸಚಿವರು, ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಕೂಡಲೇ ಶಿವಾಜಿನಗರ ಬಸ್‌ ನಿಲ್ದಾಣದಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಕಡಿವಾಣ ಹಾಕಿ, ಬಡ, ಅಮಾಯಕ ಪ್ರಯಾಣಿಕರ ಹಿತರಕ್ಷಣೆ ಮಾಡಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.