ಶನಿವಾರ, ಮೇ 8, 2021
19 °C

ಶಿಶು ಶವ ಪತ್ತೆ; ಸಾರ್ವಜನಿಕರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ವಿವಿಧ ಬಡಾವಣೆಗಳಲ್ಲಿ ಅಗಾಗ್ಗೆ ಅನಾಥ ಶಿಶುಗಳ ಶವ ಪತ್ತೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೆಳಗಿನತೋಟ ಬಡಾವಣೆಯ ಶಿರಡಿ ಸಾಯಿಬಾಬಾ ದೇವಾಲಯದ ಬಳಿ ಮೂರು ತಿಂಗಳ ಶಿಶುವಿನ ಶವ ಭಾನುವಾರ ಬೆಳಿಗ್ಗೆ ಪತ್ತೆಯಾಗಿದ್ದು, ಇನ್ನಷ್ಟು ಆತಂಕ ಹೆಚ್ಚಿಸಿದೆ.ನಾಲ್ಕು ದಿನಗಳ ಹಿಂದೆಯಷ್ಟೇ ನವಜಾತ ಶಿಶುವಿನ ಶವವೊಂದು ಕಂದವಾರದ ಬಾಗಿಲು ಬಳಿ ಪತ್ತೆಯಾಗಿತ್ತು. ಕಂದವಾರ ಬಡಾವಣೆಯ ನಿವಾಸಿಗಳು ಶಿಶುವಿನ ಕುರಿತು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದರು. ಆದರೆ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ.ಈ ಎರಡೂ ಶಿಶುಗಳ ಶವಗಳನ್ನು ತ್ಯಾಜ್ಯದ ರೂಪದಲ್ಲಿ ರಸ್ತೆ ಬದಿಯ ಹುಲ್ಲುಗಾವಲಿನಲ್ಲಿ ಎಸೆಯಲಾಗಿದ್ದ ಕಾರಣ ಅವುಗಳನ್ನು ನಾಯಿಗಳು ಮನ ಬಂದಂತೆ ತಿಂದು ಹಾಕಿವೆ. ಮುಖ ಸೇರಿದಂತೆ ಇತರೆ ಅಂಗಾಂಗಗಳನ್ನು ತಿಂದು ಹಾಕಿವೆ. ಶವಗಳು ನೋಡಲಾಗದ ಸ್ಥಿತಿಯಲ್ಲಿವೆ. ನೋಡಲು ಭಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ಶಿಶು ಮೂರು ದಿನಗಳ ಹಿಂದೆಯೇ ಮೃತಪಟ್ಟಿದ್ದು, ಇಲ್ಲಿ ಎಸೆಯಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.  ನವಜಾಥ ಶಿಶುಗಳ ಶವಗಳನ್ನು ಶಿಶುವನ್ನು ಮನ ಬಂದ ಕಡೆ ಎಸೆಯುವುದನ್ನು ನಿಯಂತ್ರಿಸುವಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರು ನಿಗಾ ವಹಿಸಬೇಕು~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.