ರಾಮನಗರ: `ದೇವರಿಗೆ ಜಾತಿಯಲ್ಲಿ ಭೇದವಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಶುದ್ಧ ಮನಸ್ಸಿನಿಂದ ಸತ್ಕಾರ್ಯಗಳನ್ನು ಮಾಡಿದಾಗ ದೇವರ ಪ್ರೀತಿಗೆ ಪಾತ್ರರಾಗುತ್ತೀರಿ~ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಭಕ್ತರಿಗೆ ತಿಳಿಸಿದರು.

ತಾಲ್ಲೂಕಿನ ಬಿಡದಿ ಸಮೀಪದ ಸಿದ್ಧಾಬೋವಿ ಪಾಳ್ಯದಲ್ಲಿ ಶುಕ್ರವಾರ ನಡೆದ ಸಲ್ಲಾಪುರದಮ್ಮ ದೇವಿಯ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

`ಜನಸೇವೆಯೇ ಜನಾರ್ದನನ ಸೇವೆ~ ಎಂಬಂತೆ ದೀನ ದುರ್ಬಲರ ಸೇವೆ ಮಾಡಬೇಕು. ದುಷ್ಟರ ಸಹವಾಸ ತ್ಯಜಿಸಿ, ಸಜ್ಜನರ ಸಂಗ ಮಾಡಬೇಕು ಎಂದರು. `ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶಿಕ್ಷಣ ಪ್ರೇರಕವಾಗುತ್ತದೆ. ತಂದೆ-ತಾಯಿಯರು ಹೆಣ್ಣು- ಗಂಡು ಎಂದು ಬೇಧ ಮಾಡದೆ ಎಲ್ಲರನ್ನೂ ಸಮಾನರಾಗಿ ಕಾಣಬೇಕು. ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ, ಉತ್ತಮ ಆಚಾರ ಹಾಗೂ ವಿಚಾರವಂತರನ್ನಾಗಿ ರೂಪಿಸಬೇಕು~ ಎಂದರು.

`ಹಿಂದುಳಿದವರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಶ್ರಮ ಪಡದಿದ್ದರೆ ಪ್ರಗತಿ ಸಾಧಿಸುವುದು ಅಸಾಧ್ಯ. ತಮ್ಮ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳೆವಣಿಗೆಗೆ ಸ್ವತಃ ಪ್ರಯತ್ನಶೀಲರಾಗಬೇಕು. ಎಲ್ಲಾ ಬಗೆಯ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಶ್ರಮವೊಂದೇ ಪ್ರಮುಖ ಸಾಧನ. ದುಡಿಮೆಯಿಂದ ಸಮಾಜ ಎಲ್ಲಾ ವರ್ಗದ ಜನರು ಮುಂದುವರಿಯಲು ಅವಕಾಶ ಲಭ್ಯವಾಗುತ್ತದೆ~ ಎಂದು ತಿಳಿಸಿದರು.

`ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಪೂರ್ವಕವಾಗಿ ದೇವಾಲಯಗಳನ್ನು ನಿರ್ಮಿಸುತ್ತಿರುವುದು, ಗ್ರಾಮೀಣ ಜನರ ನಡುವೆ ಇರುವ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ~. ದೇವರ ಆರಾಧನೆಗೆ ಎಲ್ಲರೂ ಪಾಲ್ಗೊಳ್ಳುವಂತೆ ಗ್ರಾಮದ ಸಮಸ್ಯೆಗಳನ್ನು ಒಮ್ಮತದಿಂದ ಪರಿಹರಿಸಿಕೊಳ್ಳಬೇಕು.

ದೇವರ ದರ್ಶನ ಮತ್ತು ದೇವಾಲಯಗಳ ಪ್ರದಕ್ಷಿಣೆಯಿಂದ ಮನಸ್ಸಿನಲ್ಲಿ ಶಾಂತಿ ಮತ್ತು ಸದ್ಭಾವನೆಗಳು ಬೆಳೆಯುತ್ತವೆ. ಉತ್ತಮ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಲು ಮನಸ್ಸು ಬರುತ್ತದೆ. ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ಧ ನೆಲೆಸಲು ದೇವಸ್ಥಾನಗಳ ನಿರ್ಮಾಣ ಸಹಕಾರಿಯಾಗಲಿದೆ~ ಎಂದರು.

ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಜೆಡಿಎಸ್ನ ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಟಪ್ಪ, ಕೆಪಿಸಿಸಿ ಸದಸ್ಯ ಎ.ಮಂಜು, ಕಂಚುಟಿಗರ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಪಣ್ಣ, ಕಾರ್ಯದರ್ಶಿ ನರಸಿಂಹಯ್ಯ, ಮುಖಂಡರಾದ ಗಾಣಕಲ್ಲು ನಟರಾಜು, ಯೋಗಾನಂದ, ರಾಮೇಗೌಡ, ಉದ್ಯಮಿ ಕೆ.ಎಂ.ಕೃಷ್ಣಯ್ಯ, ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ವಿ.ವೆಂಕಟೇಶ್, ಮುನಿಸ್ವಾಮಯ್ಯ, ಮದ್ದೂರಯ್ಯ, ನಂಜುಂಡಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.