ಗುರುವಾರ , ಮಾರ್ಚ್ 4, 2021
18 °C
ದೋನಿ 32ನೇ ಹುಟ್ಟುಹಬ್ಬ

ಶುಭಾಶಯಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಭಾಶಯಗಳ ಮಹಾಪೂರ

ರಾಂಚಿ /ನವದೆಹಲಿ (ಪಿಟಿಐ):  ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿಗೆ ಭಾನುವಾರ 32ನೇ ಜನ್ಮದಿನದ ಸಂಭ್ರಮ. ಕುಟುಂಬ ಸದಸ್ಯರು ಸೇರಿದಂತೆ ಸ್ನೇಹಿತರು ಹಾಗೂ ಕ್ರೀಡಾ ಪ್ರೇಮಿಗಳಿಂದ `ಮಹಿ'ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಅವರು ಭಾರತ ತಂಡಕ್ಕೆ ಮತ್ತಷ್ಟು ಪ್ರಶಸ್ತಿಗಳನ್ನು ಗೆದ್ದು ತರಲಿ ಎಂದು ಕ್ರೀಡಾಪ್ರೇಮಿಗಳು ಹಾರೈಸಿದ್ದಾರೆ.`ನಾಯಕ ಎಂ.ಎಸ್. ದೋನಿಗೆ ಜನ್ಮದಿನದ ಶುಭಾಶಯಗಳು' ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವಿಟರ್‌ನಲ್ಲಿ ಶುಭ ಕೋರಿದೆ. `ಮಹಿ' ಇದೀಗ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡದ ಜೊತೆಗಿದ್ದಾರೆ. ಆದರೆ ಗಾಯದಿಂದ ಬಳಲುತ್ತಿರುವ ಅವರು ಆಡುತ್ತಿಲ್ಲ.ದೋನಿ ಅನುಪಸ್ಥಿತಿಯಲ್ಲಿ ಅವರ ಕುಟುಂಬ ಸದಸ್ಯರು ಹುಟ್ಟುಹಬ್ಬದ ಸಂಭ್ರಮ ಆಚರಿಸಿದರು. `ದೋನಿ ಹುಟ್ಟುಹಬ್ಬವನ್ನು ಅವರ ಕುಟುಂಬದವರು ಸಂಭ್ರಮದಿಂದ ಆಚರಿಸಿದರು' ಎಂದು ಮಹಿ ಅವರ ಮೊದಲ ಕೋಚ್ ಚಂಚಲ್ ಭಟ್ಟಾಚಾರ್ಯ ತಿಳಿಸಿದ್ದಾರೆ.ರಾಂಚಿ ಅಲ್ಲದೆ ದೇಶದ ವಿವಿಧ ನಗರಗಳಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ತಮ್ಮ ನೆಚ್ಚಿನ ನಾಯಕನ ಜನ್ಮದಿನ ಆಚರಿಸಿಕೊಂಡರು. `ರಾಂಚಿಯ ಆಟಗಾರ ತನ್ನ ಕ್ರಿಕೆಟ್ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ' ಎಂದು ಅಭಿಮಾನಿಗಳು ಆಶಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.