ದೋಹಾ (ಪಿಟಿಐ): ಅನುರಾಜ್ ಸಿಂಗ್, ಶ್ವೇತಾ ಚೌದ್ರಿ ಹಾಗೂ ಹೀನಾ ಸಿಧು ಅವರನ್ನೊಳಗೊಂಡ ಭಾರತ ಮಹಿಳಾ ತಂಡ ಇಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಜಯಿಸಿತು.

ಸೋಮವಾರ ನಡೆದ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಭಾರತ ತಂಡ ಕೇವಲ ಒಂದು ಪಾಯಿಂಟ್ ಅಂತರದಿಂದ ಚೀನಾ ತಂಡವನ್ನು ಮಣಿಸಿತು.

ಆದರೆ, ಹೀನಾ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಅವಕಾಶ ತಪ್ಪಿಸಿಕೊಂಡರು. ವೈಯಕ್ತಿಕ ವಿಭಾಗದ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಅನುರಾಜ್ ಕಂಚು ಸಹ ಗೆದ್ದುಕೊಂಡರು.

ಭಾರತದ ಇನ್ನೊಬ್ಬ ಸ್ಪರ್ಧಿ ರಾಜ ಕುಮಾರಿ 50ಮೀ. ಪ್ರೋನ್ ವಿಭಾಗದಲ್ಲಿ ಚಿನ್ನ ಜಯಿಸಿ ನಾಲ್ಕನೇ ದಿನ ಭಾರತದ ಮಡಿಲಿಗೆ ಎರಡನೇ ಬಂಗಾರ ತಂದುಕೊಟ್ಟರು.

ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಈ ಸ್ಪರ್ಧಿ ಕೇವಲ ಒಂದು ಪಾಯಿಂಟ್ ಅಂತರದಿಂದ ಸೋಲು ಕಂಡಿದ್ದರು. ಇದರಿಂದ ಚಿನ್ನದಿಂದ ವಂಚಿತರಾಗಿದ್ದರು. ಈಗ ಈ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.