ಪಂಚರಂಗಿ
`ಶೂಟೌಟ್ ಅಟ್ ಲೋಖಂಡವಾಲಾ~ ಚಿತ್ರದ ಮುಂದುವರಿದ ಭಾಗ `ಶೂಟೌಟ್ ಅಟ್ ವಡಾಲಾ~ ಚಿತ್ರೀಕರಣಕ್ಕೆ ಮುನ್ನವೇ ಸಾಕಷ್ಟು ಸುದ್ದಿ ಮಾಡುತ್ತಿದೆ.

ಈ ಚಿತ್ರದ ತಾರಾಗಣ ಘೋಷಿಸಲು ಸಂಜಯ್ ಗುಪ್ತಾ ಸುದ್ದಿಗೋಷ್ಠಿ ಕರೆದಿದ್ದೇ ಅಪರಾಧವಾಗಿದೆ! ವಾಸ್ತವಕ್ಕೆ ಹತ್ತಿರವಿರಲಿ ಎಂಬಂತೆ ಮುಂಬೈ ಪೊಲೀಸ್ನ `ಲೆಟರ್ ಹೆಡ್~ನ ನಕಲು ಸೃಷ್ಟಿಸಿ ಪತ್ರಿಕಾಗೋಷ್ಠಿಗೆ ಆಹ್ವಾನ ಕಳುಹಿಸಿದ್ದರು. ಆದರೆ ಸಂಜಯ್ ಗುಪ್ತಾ ಮೇಲೆ ಮುಂಬೈ ಪೊಲೀಸರು ನಕಲು ಮತ್ತು ವಂಚನೆಯ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಲೋಖಂಡವಾಲಾ ಚಿತ್ರದಲ್ಲಿ ಎ.ಎ. ಖಾನ್ ಪಾತ್ರ ನಿರ್ವಹಿಸಿದ್ದ ಸಂಜಯ್ ದತ್ಗೆ ಈ ಚಿತ್ರದಲ್ಲಿ ಯಾವ ಪಾತ್ರವೂ ನೀಡಿಲ್ಲ. ಲೋಖಂಡ್ವಾಲಾ ಚಿತ್ರದ ಸಂಭಾವನೆಯ ಬಗ್ಗೆ ಸಂಜು ಮತ್ತು ಸಂಜಯ್ ಗುಪ್ತಾ ನಡುವೆ ಜಗಳ ನಡೆದಿತ್ತು. ನಂತರ ಸಂಜಯ್ ಗುಪ್ತಾ ಸಂಜುಬಾಬಾ ಜೊತೆಗೆ ಯಾವತ್ತೂ ಕೆಲಸ ಮಾಡುವುದಿಲ್ಲ ಎಂದೂ ಸಂದರ್ಶನವೊಂದರಲ್ಲಿ ಹೇಳಿದ್ದರು.

ಈಗ ಶೂಟೌಟ್ ವಡಾಲಾಗೆ ಮಹೇಶ್ ಮಂಜ್ರೇಕರ್ಗೆ ಅವಕಾಶ ನೀಡಿದ್ದಾರೆ. ಇನ್ನು ವಿದ್ಯಾ ಜೋಷಿ ಪಾತ್ರ ನಿರ್ವಹಿಸುತ್ತಿರುವ ಕಂಗನಾ ರನಾವತ್ ಮಾತ್ರ ಖುಷಿಯಲ್ಲಿದ್ದಾರೆ. ಬಾಲಿವುಡ್ನಲ್ಲಿ ಯಾವತ್ತಿಗೂ ರೇಖಾ ಫ್ಯಾಶನ್ ಐಕಾನ್ ಇದ್ದಂತೆ. 70-80ರ ದಶಕದ ಫ್ಯಾಶನ್ಗೆ ಸ್ಮಿತಾ ಪಾಟೀಲ ಹಾಗೂ ರೇಖಾ ಅವರೇ ಸ್ಫೂರ್ತಿಯಾಗಿದ್ದಾರೆ. ಅವರಂತೆಯೇ ಕಾಣಿಸಿಕೊಳ್ಳಲು ತಾವು ಪ್ರಯತ್ನಿಸಿರುವುದಾಗಿಯೂ ಕಂಗನಾ ಹೇಳುತ್ತಿದ್ದಾರೆ.

ಗ್ಯಾಂಗ್ಸ್ಟರ್ ಮಾನ್ಯಾ ಸುರ್ವೆಯ ಗೆಳತಿಯ ಪಾತ್ರ ಕಂಗನಾಳದ್ದು. ಕಂಗನಾ ಜೊತೆಗೆ ಜಾನ್ ಅಬ್ರಹಾಂ ನಟಿಸುತ್ತಿದ್ದಾರೆ. ಅನಿಲ್ ಕಪೂರ್, ತುಷಾರ್ ಕಪೂರ್, ರಾನಿತ್ ರಾಯ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.