ಶೃಂಗೇರಿ: ಇಲ್ಲಿನ ಜ್ಞಾನಭಾರತಿ ವಿದ್ಯಾಕೇಂದ್ರದ ಆವರಣದಲ್ಲಿ ಇತ್ತೀಚೆಗೆ ಸಿ.ವಿ.ರಾಮನ್ ವ್ಯಕ್ತಿಪರಿಚಯ ಹಾಗೂ ನಕ್ಷತ್ರ ವೀಕ್ಷಣಾ ಕಾರ್ಯಾಗಾರ ನಡೆಯಿತು. ಭಾರತ ದೇಶವು ಗುಲಾಮಗಿರಿಯಲ್ಲಿ ನರಳುತ್ತಿದ್ದ ಕಾಲದಲ್ಲಿ ಜಗತ್ತನ್ನು ಭಾರತದೆಡೆಗೆ ನೋಡುವಂತಹ ಸ್ಥಾನವನ್ನು ಸಿ. ವಿ. ರಾಮನ್ ಕಲ್ಪಿಸಿದರು. ಅವರು ನಡೆಸಿದ ಸಂಶೋಧನೆಗಳ ಫಲವಾಗಿ ಇಂದಿಗೂ ಸಾವಿರಾರು ಯುವಕರು ವಿಜ್ಞಾನ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ ಎಂದು ಶಿಕ್ಷಕ ವೈ.ಆರ್. ರಾಜೀವ್ ಹೇಳಿದರು.

ತಾಲ್ಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ನಕ್ಷತ್ರ ಕುರಿತಾದ ದೃಕ್ ಶ್ರವಣ ಮಾಧ್ಯಮದ ಮೂಲಕ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ತೆರೆದ ಆಕಾಶದಲ್ಲಿನ ನಕ್ಷತ್ರ ಮತ್ತು ನಕ್ಷತ್ರರಾಶಿಗಳ ವೀಕ್ಷಣೆ ಮಾಡಲಾಯಿತು.

ನಕ್ಷತ್ರ, ಗ್ರಹಗಳು, ರಾಶಿಪುಂಜಗಳು, ಉಲ್ಕೆಗಳ ಬಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕ ಶಂಕರ್ ನಾರಾಯಣ್ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ಜ್ಞಾನಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಎಂ. ಎನ್. ಲಕ್ಷ್ಮೀನಾರಾಯಣ ಭಟ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ದಿನೇಶ್, ಸಂಸ್ಥೆಯ ಕಾರ್ಯದರ್ಶಿ ಜಿ. ಎಂ. ಸತೀಶ್, ಉಪಾಧ್ಯಕ್ಷ ಎ.ಲಕ್ಷ್ಮಣ ದಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.