ಭಾನುವಾರ, ಮೇ 16, 2021
22 °C

ಶೇಂಗಾಕ್ಕೆ ಸುರಳಿ ಪೂಚಿ ರೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ 9350 ಹೆಕ್ಟೇರ್ ಶೇಂಗಾ ಸುರಳಿಪೂಚಿ ಕೀಟ ರೋಗಕ್ಕೆ ತುತ್ತಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ನಾಗರಾಜು ತಿಳಿಸಿದ್ದಾರೆ.ಸುರಳಿಪೂಚಿ ಕೀಟ ಬಾಧೆಯು ತಾಲ್ಲೂಕಿನ ಕಸಬಾ, ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಬುಕ್ಕಾಪಟ್ಟಣ ಹಾಗೂ ಕಳ್ಳಂಬೆಳ್ಳ ಹೋಬಳಿಗಳಲ್ಲಿ ಭಾಗಶಃ ಕಂಡುಬಂದಿದೆ ಎಂದು  ತಿಳಿಸಿದ್ದಾರೆ.ಶೇಂಗಾ ಬೆಳೆಗೆ ಸುರಳಿಪೂಚಿ ಕೀಟಬಾಧೆ ಹಿನ್ನೆಲೆಯಲ್ಲಿ ಈಚೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕೃಷಿ ಹಾಗೂ ಕೀಟತಜ್ಞರಾದ ಡಾ.ಜಗದೀಶ್, ಡಾ.ಪ್ರಭುಗಾಣಿಗರ್, ಡಾ.ಚನ್ನಿಕೃಷ್ಣ ಮತ್ತಿತರರನ್ನು ಆಹ್ವಾನಿಸಿ ಅವರನ್ನು ತಾಲ್ಲೂಕಿನ ಹುಚ್ಚಗೀರನಹಳ್ಳಿ, ಮುದ್ದರಂಗನಹಳ್ಳಿ, ಬಂದಕುಂಟೆ, ಹನುಮನಹಳ್ಳಿ ಹಾಗೂ ರಂಗಾಪುರದ ಗ್ರಾಮಗಳ ಶೇಂಗಾ ಬೆಳೆ ತಾಕುಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದು, ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾಗಿ ಹೇಳಿದ್ದಾರೆ.ತಾಲ್ಲೂಕಿನಲ್ಲಿ ಈ ವರ್ಷ 45530 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೇವಲ 23750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.