ಧಾರವಾಡ: `ಖಾಸಗೀಕರಣದ ಈ ಸಂದರ್ಭದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ತಲೆಯೆತ್ತುತ್ತಿವೆ. ಆ ಮಟ್ಟಕ್ಕೆ ಶಿಕ್ಷಣ ಕ್ಷೇತ್ರ ಬದಲಾವಣೆಗೆ ತೆರೆದುಕೊಂಡಿದೆ' ಎಂದು ಶಾಸಕ ಬಿ.ಆರ್.ಯಾವಗಲ್ ಹೇಳಿದರು.

ಈ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ ಸಿಬಿಎಸ್ಇ ಪಠ್ಯಕ್ರಮದ ಲೀಲಾವತಿ ಚರಂತಿಮಠ ಪಬ್ಲಿಕ್ ಸ್ಕೂಲ್ನಲ್ಲಿ ಭಾನುವಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚು ಆಸಕ್ತಿ ವಹಿಸಿರುವುದು ಉತ್ತಮ ಬೆಳವಣಿಗೆ. ಆದರ್ಶಪ್ರಾಯ ಶಿಕ್ಷಣ ಸಂಸ್ಥೆಯಾಗಿ ಲೀಲಾವತಿ ಚರಂತಿಮಠ ಪಬ್ಲಿಕ್ ಸ್ಕೂಲ್ ಬೆಳೆದು ಬರಲಿ' ಎಂದು ಹಾರೈಸಿದರು.

ಶಾಲೆಯನ್ನು ಉದ್ಘಾಟಿಸಿದ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ, `ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣವು ಮಕ್ಕಳ ವ್ಯಾಸಂಗದ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿರಬೇಕು. ಈ ದಿಸೆಯಲ್ಲಿ ಪಬ್ಲಿಕ್ ಸ್ಕೂಲ್ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು' ಎಂದು ಸಲಹೆ ನೀಡಿದರು.

`ಸರ್ಕಾರಿ ಇಲ್ಲವೇ ಖಾಸಗಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶವು ಮಕ್ಕಳ ಸರ್ವತೋಮುಖ ವಿಕಾಸವೇ ಆಗಿದೆ. ಶಾಲಾ ಪರಿಸರಕ್ಕೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಅರ್ಹ, ನುರಿತ, ಅನುಭವಿ ಶಿಕ್ಷಕರ ಬೋಧನೆಯತ್ತ ಎಲ್ಲರ ಚಿತ್ತ ಕೇಂದ್ರೀಕೃತವಾದಾಗ ರಾಷ್ಟ್ರ ಬಯಸುವ ಸಮರ್ಥ ಶಕ್ತಿಶಾಲಿ ಮಾನವ ಸಂಪನ್ಮೂಲದ ಅಭಿವೃದ್ಧಿ ಸಾಧ್ಯವಾಗುತ್ತದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಎ.ಎನ್.ಪಾಟೀಲ ಹೇಳಿದರು.

ಸಂಸ್ಥೆಯ ಆಡಳಿತ ಮಂಡಳಿಯ ವ್ಯವಸ್ಥಾಪಕ ಟ್ರಸ್ಟಿ ಅರುಣ ಚರಂತಿಮಠ ಮಾತನಾಡಿ, `ನಮ್ಮನ್ನು ಬೆಳೆಸಿದ ಸಮಾನಕ್ಕೆ ಏನಾದರೂ ಮಾಡಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಅದಕ್ಕೆ ನಮ್ಮ ಮಾತೋಶ್ರೀ ಹೆಸರಿನಲ್ಲಿ ಈ ಶಾಲೆ ನಿರ್ಮಾಣ ಮಾಡಿದ್ದು, ಮಕ್ಕಳು ಎಲ್ಲ ಬಗೆಯಲ್ಲೂ ವಿಕಾಸ ಹೊಂದಬೇಕೆಂಬುದು ನಮ್ಮ ಆಸೆ' ಎಂದರು.

ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೆಟಿವ್ ಟೀಚಿಂಗ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮೀನಾಕುಮಾರಿ, ಹಿರಿಯ ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪಗೌಡ ಪಾಟೀಲ ಮಾತನಾಡಿದರು.

ಶಾಲೆಯ ಪ್ರಾಚಾರ್ಯೆ ಲಿಲಿಯನ್ ಆಂಟನಿ ಶಾನ್ ಸ್ವಾಗತಿಸಿದರು. ಗುರು ಪಾಟೀಲ ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.