ಬೆಂಗಳೂರು: ಶಾಲೆಗೆ ತಡವಾಗಿ ಬಂದ ಕಾರಣಕ್ಕೆ ರಶ್ಮಿ ಎಂಬ ನಾಲ್ಕೂವರೆ ವರ್ಷದ ಮಗುವಿಗೆ ಆಯಾ ಚಂದ್ರಕಲಾ ಎಂಬುವರು ಹಲ್ಲೆ ನಡೆಸಿ ಶೌಚಾಲಯದಲ್ಲಿ ಕೂಡಿ ಹಾಕಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಾಲೇಔಟ್ ಬಸ್ ನಿಲ್ದಾಣ ಸಮೀಪದ ಲಕ್ಷ್ಮಿರಂಗನಾಥ ಶಾಲೆಯಲ್ಲಿ ಜು.15ರಂದು ಈ ಘಟನೆ ನಡೆದಿದೆ. ಈ ಸಂಬಂಧ ಮಗುವಿನ ಪೋಷಕರು ಮಕ್ಕಳ ಹಕ್ಕುಗಳ ಆಯೋಗ, ಮಕ್ಕಳ ಸಹಾಯವಾಣಿ ಹಾಗೂ ಚಂದ್ರಾಲೇಔಟ್ ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೆ, `ಕೇವಲ ಸ್ವೀಕೃತಿ ಪತ್ರವನ್ನು ನೀಡಿರುವ ಪೊಲೀಸರು, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂಬುದು ಪೋಷಕರು ಆರೋಪ.

`ನನ್ನ ಇಬ್ಬರೂ ಮಕ್ಕಳು ಲಕ್ಷ್ಮಿರಂಗನಾಥ ಶಾಲೆಯಲ್ಲೇ ಓದುತ್ತಿದ್ದಾರೆ. ಮೊದಲು ಮಗಳು ರಕ್ಷಿತಾ ಆರನೇ ತರಗತಿ ಹಾಗೂ ಎರಡನೇ ಮಗಳು ರಶ್ಮಿ ಎಲ್ಕೆಜಿ ವ್ಯಾಸಂಗ ಮಾಡುತ್ತಿದ್ದಾರೆ. ಜುಲೈ 15ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಕ್ಕಳನ್ನು ಶಾಲೆಗೆ ಬಿಟ್ಟು ನಾನು ಕೆಲಸಕ್ಕೆ ಹೋಗಿದ್ದೆ. ರಶ್ಮಿ ತಡವಾಗಿ ಶಾಲೆಗೆ ಬಂದಳು ಎಂಬ ಕಾರಣಕ್ಕೆ ಆಯಾ ಚಂದ್ರಕಲಾ ಮನಬಂದಂತೆ ಹೊಡೆದಿದ್ದಾರೆ.

ಇದರಿಂದಾಗಿ ಮಗಳ ಹಲ್ಲು ಮುರಿದಿದ್ದು, ಕೆನ್ನೆ ಊದಿಕೊಂಡಿದೆ. ನೋವಿನಿಂದ ಆಕೆ ಅಳಲಾರಂಭಿಸಿದಾಗ ಶೌಚಾಲಯದಲ್ಲಿ ಕೂಡಿ ಹಾಕಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ರಕ್ಷಿತಾ, ತಂಗಿಯನ್ನು ಮನೆಗೆ ಕರೆದುಕೊಂಡು ಹೋಗಲು ಆಕೆಯ ತರಗತಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ' ಎಂದು ಮಗುವಿನ ತಾಯಿ ಸುಮಿತ್ರಾ ಆರೋಪಿಸಿದ್ದಾರೆ.

`ಮಕ್ಕಳು ಸಂಜೆ ಮನೆಗೆ ಬಂದಾಗ ಪತಿ ಹಾಗೂ ನಾನು ಕೆಲಸಕ್ಕೆ ಹೋಗಿದ್ದೆವು. ರಶ್ಮಿಯ ಸ್ಥಿತಿಯನ್ನು ಕಂಡು ಆತಂಕಗೊಂಡ ಅಕ್ಕ ಜಯಲಕ್ಷ್ಮಿ, ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ, ಶಾಲೆಗೆ ಹೋಗಿ ಆಯಾ ಜತೆ ಜಗಳವಾಡಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ನಾನು ಮನೆಗೆ ಬಂದಾಗ ಮನೆ ಬೀಗ ಹಾಕಿತ್ತು. ನೆರೆಮನೆಯವರಿಂದ ವಿಷಯ ತಿಳಿದುಕೊಂಡು ಶಾಲೆಯ ಬಳಿ ಹೋದಾಗ ಸಂಪೂರ್ಣ ಮಾಹಿತಿ ಸಿಕ್ಕಿತು. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿ ವಿಷಯ ತಿಳಿಸಿದೆ. ಎರಡು ಹೊಯ್ಸಳ ವಾಹನಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು' ಎಂದು ಮಾಹಿತಿ ನೀಡಿದರು.

`ಬಳಿಕ ನಮ್ಮನ್ನು ಠಾಣೆಗೆ ಕರೆದೊಯ್ದ ಪೊಲೀಸರು ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಆದರೆ, ಮಗುವಿಗೆ ಹಿಂಸಿಸಿದ ಆಯಾ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಘಟನೆ ನಡೆದ ದಿನದಿಂದ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ರಶ್ಮಿ ಜ್ವರದಿಂದ ಬಳಲುತ್ತಿದ್ದು, ವಾಣಿವಿಲಾಸ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಠಾಣೆಗೆ ದೂರು ಕೊಟ್ಟಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಲು ಮುಂದಾಗಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ' ಎಂದು ಸುಮಿತ್ರಾ ಕಣ್ಣೀರಿಟ್ಟರು.

`ಶಾಲೆಯಲ್ಲಿ ಆಯಾ ಚಂದ್ರಕಲಾ ಅವರು ಮಗುವಿಗೆ ಕಿರುಕುಳ ನೀಡಿರುವ ಸಂಬಂಧ ಆಯೋಗಕ್ಕೆ ದೂರು ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ವರದಿ ಶನಿವಾರ ಕೈಸೇರಲಿದೆ' ಎಂದು ಮಕ್ಕಳ ಕಲ್ಯಾಣ ರಕ್ಷಣಾ ಆಯೋಗದ ಅಧ್ಯಕ್ಷ ಎಚ್.ಆರ್.ಉಮೇಶಾರಾಧ್ಯ `ಪ್ರಜಾವಾಣಿ'ಗೆ ತಿಳಿಸಿದರು.

ಪೋಷಕರಿಗೆ ತಿಳಿಸಿದರೆ ಹಲ್ಲು ಮುರಿಯುತ್ತೇನೆ ಎಂದರು
ಮಧ್ಯಾಹ್ನ 3.30ರ ಸುಮಾರಿಗೆ ನನ್ನ ತರಗತಿ ಮುಗಿಯಿತು. ಹೀಗಾಗಿ, ಎಂದಿನಂತೆ ತಂಗಿಯನ್ನು ಮನೆಗೆ ಕರೆದುಕೊಂಡು ಹೋಗಲು ಆಕೆಯ ತರಗತಿಗೆ ಹೋದೆ. ಆದರೆ, ರಶ್ಮಿ ಅಲ್ಲಿರಲಿಲ್ಲ. ತಂಗಿ ಬಗ್ಗೆ ಆಯಾ ಅವರಲ್ಲಿ ವಿಚಾರಿಸಿದಾಗ ಶೌಚಾಲಯದಲ್ಲಿರುವುದಾಗಿ ಹೇಳಿದರು.

ಶೌಚಾಲಯದ ಬಾಗಿಲು ತೆಗೆದಾಗ ರಶ್ಮಿ ಅಳುತ್ತಾ ಹೊರ ಬಂದಳು. ಏನಾಯಿತು ಎಂದು ಕೇಳಿದರೆ, ಆಯಾ ಹೊಡೆದು ಕೂಡಿ ಹಾಕಿದ್ದಾಗಿ ಹೇಳಿದಳು. ಇದೇ ವೇಳೆ ನಮ್ಮ ಬಳಿ ಬಂದ ಆಯಾ, `ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ನಿನ್ನ ಹಲ್ಲನ್ನೂ ಮುರಿಯುತ್ತೇನೆ' ಎಂದು ಬೆದರಿಸಿದರು.
-ರಕ್ಷಿತಾ, ರಶ್ಮಿಯ ಅಕ್ಕ

ರಾಜಿ ಬೇಡ, ಕ್ರಮ ಕೈಗೊಳ್ಳಿ
ಶಾಲೆಯ ಸಿಬ್ಬಂದಿ ಮಗುವಿನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೋಷಕರು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಶಿಕ್ಷಣ ಇಲಾಖೆ ಪ್ರಕಾರ ಇಂತಹ ಪ್ರಕರಣಗಳಲ್ಲಿ ಮೊದಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಬೇಕು.

ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳದೇ ರಾಜಿ ಮಾಡಿಸಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತನಿಖೆ ಪ್ರಕ್ರಿಯೆ ತಡವಾದರೆ ಮಗುವಿನ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಕ್ರಮ ಕೈಗೊಳ್ಳಬೇಕು.
- ನಾಗಸಿಂಹ ಜಿ.ರಾವ್, ಆರ್ಟಿಇ ಕಾರ್ಯಪಡೆಯ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.